March 20, 2026

ಹುಲಿಕಲ್ ಘಾಟಿಯಲ್ಲಿ ಅಪಘಾತ: ಇಬ್ಬರು ಸಾವು

0
image_editor_output_image-749253438-1668140855712.jpg

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿಯಲ್ಲಿ ಗುರುವಾರ ತಡರಾತ್ರಿ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಬೈಕಿನಲ್ಲಿ ಬಂದವರಿಗೆ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದಾನೆ.

ಹುಲಿಕಲ್ ಲಕ್ಶ್ಮಿ ನರಸಿಂಹ ದೇವಸ್ಥಾನ ಸಮೀಪ ಅಪಘಾತ ನಡೆದಿದ್ದು, ಮಾಸ್ತಿಕಟ್ಟೆಯ ಕಂಪನ ಕೈನ ರವಿ ಹಾಗೂ ಅವರ ಅಣ್ಣನ ಮೂರು ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹೊಸನಗರ ಮಾಸ್ತಿಕಟ್ಟೆಯ ಕಂಪನ ಕೈ ರವಿ ಮತ್ತು ಪತ್ನಿ ಹಾಗೂ ಅವರ ಅಕ್ಕನ ಮಗು ಸಾವನ್ನಪ್ಪಿದ್ದಾರೆ.

ಅಪಘಾತದಿಂದಾಗಿ ಹುಲಿಕಲ್ ಮಾಸ್ತಿಕಟ್ಟೆ- ಹೊಸಂಗಡಿ ನಡುವೆ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಗಂಭೀರ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!