ಬಂಟ್ವಾಳ: ಮಂಗಳೂರಿಗೆ ಇಂಟರ್‌ವ್ಯೂಹ್‌ಗಾಗಿ ಹೋದ ಯುವತಿ ನಾಪತ್ತೆ: ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬಂಟ್ವಾಳ: ಯುವತಿಯೋರ್ವಳು ಮಂಗಳೂರಿನಲ್ಲಿ ಇಂಟರ್ ವ್ಯೂಹ್ ಇದೆ ಎಂದು ಹೋಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ನಾಪತ್ತೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕಂಬಳಬೆಟ್ಟು ನಿವಾಸಿ ದಿ.ಆನಂದ ಅವರ ಪುತ್ರಿ ಸುಶ್ಮಿತ (21) ಎನ್ನಲಾಗಿದೆ.
ನ.8 ರಂದು ಮಂಗಳವಾರ ಬೆಳಿಗ್ಗೆ ಮನೆಯಿಂದ ಮಂಗೂರಿನಲ್ಲಿ ಕೆಲಸವೊಂದರ ಇಂಟರ್ ವ್ಯೂಹ್ ಇದೆ ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.





