March 22, 2026

ಪುತ್ತೂರು: ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಬಸ್ ಚಲಾಯಿಸಿದ ಚಾಲಕ

0
9e0a61059a96fbbe19d0f90507849619.jpg

ಪುತ್ತೂರು: ವಿದ್ಯಾರ್ಥಿಯೋರ್ವ ‘ರೈಟ್ ಪೋಯಿ’ ಎಂದು ಹೇಳಿದ್ದು, ಈ ವೇಳೆ ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನ.3 ರಂದು ನಡೆದಿದೆ.

ಪುತ್ತೂರಿನಿಂದ ಮಂಗಳೂರಿಗೆ ತೆರಳುವ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಈ ಘಟನೆ ನಡೆದಿದೆ. ಪುತ್ತೂರು ಬಸ್ ನಿಲ್ದಾಣದಿಂದ ಬಸ್ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ‘ರೈಟ್ ಪೋಯಿ’ ಎಂದು ಹೇಳಿದ್ದು, ನಿರ್ವಾಹಕನೇ ‘ರೈಟ್ ಪೋಯಿ’ ಎಂದು ಹೇಳಿದ್ದಾಗಿ ಭಾವಿಸಿದ ಚಾಲಕ ಬಸ್ ಚಲಾಯಿಸಿದ್ದಾರೆ.

ನಿಲ್ದಾಣದಿಂದ ಹೊರಟ ಬಸ್ ಎಂ.ಟಿ ರಸ್ತೆಯಾಗಿ ತಾಲೂಕು ಕಛೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ಚಾಲಕನಿಗೆ ಬಸ್ ನಲ್ಲಿ ನಿರ್ವಾಹಕ ಇಲ್ಲದಿರುವುದು ತಿಳಿದಿದ್ದು, ಈ ವೇಳೆ ನಿರ್ವಾಹಕ ಬೇರೊಂದು ಕೆ.ಎಸ್.ಆರ್.ಟಿ.ಸಿ. ಬಸ್ ಮೂಲಕ ಆಗಮಿಸಿ ತನ್ನ ಕರ್ತವ್ಯದ ಬಸ್ ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!