ಗುಜರಾತ್ ಸೇತುವೆ ದುರಂತ – ಪೊಲೀಸರಿಂದ ನಾಲ್ವರ ಬಂಧನ
ಮೊರ್ಬಿ: ಟಿಷರ ಕಾಲದ ಮೊರ್ಬಿ ತೂಗು ಸೇತುವೆ ಭಾನುವಾರ ಸಂಜೆ ಕುಸಿದು ಕನಿಷ್ಠ 141 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಕೋಟ್ ರೇಂಜ್ ಐಜಿ ಅಶೋಕ್ ಯಾದವ್, ನಾವು ಇದುವರೆಗೆ ನಾಲ್ವರನ್ನು ಬಂಧಿಸಿದ್ದೇವೆ, ತನಿಖೆ ನಡೆಯುತ್ತಿದೆ. ಪೊಲೀಸರು ಶೀಘ್ರದಲ್ಲೇ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದರು.
ಇನ್ನು ಭಾನುವಾರ ಸಂಜೆ ಕುಸಿದು ಬಿದ್ದ ಮೋರ್ಬಿ ನಗರದ ಸೇತುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರ್ಯವನ್ನು ನೀಡಿದ ಏಜೆನ್ಸಿಗಳ ವಿರುದ್ಧ ಪೊಲೀಸರು ನರಹತ್ಯೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.