ಬಿಜೆಪಿ ಸರ್ಕಾರವು ರಸ್ತೆ ಗುಂಡಿಗಳ ಮೂಲಕ ಜನರಿಗೆ ಮರಣ ಭಾಗ್ಯ ನೀಡಿದೆ – ಡಿಕೆಶಿ ವಾಗ್ದಾಳಿ
ಬೆಂಗಳೂರು: ಮುಖ್ಯಮಂತ್ರಿಗಳೇ ನೀವು ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದು, ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಎರಡು ವರ್ಷದಲ್ಲಿ 18 ಜನ ಸತ್ತಿದ್ದು, ಈ ಮೂಲಕ ನೀವು ಜನತೆಗೆ ಮರಣ ಭಾಗ್ಯ ನೀಡಿದ್ದೀರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರಕ್ಕೆ ಇಷ್ಟು ದೊಡ್ಡ ಶಕ್ತಿ, ರಾಜ್ಯಕ್ಕೆ ಗೌರವ ಬಂದಿದ್ದರೆ ಅದು ಕಾಂಗ್ರೆಸ್ ಸರ್ಕಾರದಿಂದ. ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯ ಅತಿ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ ಎಂದರು.
ಇನ್ನು ಬಿಜೆಪಿ ಸರ್ಕಾರವನ್ನು ತೊಡೆದು ಹಾಕಿ ಮತ್ತೆ ರಾಜ್ಯವನ್ನು ನಂಬರ್ 1 ಮಾಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.