July 3, 2026

ಪ್ರೀತಿ ವಿಚಾರಕ್ಕೆ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

0
image_editor_output_image261471753-1667030550208.jpg

ಚೆನ್ನೈ: ಪ್ರೀತಿ ವಿಚಾರಕ್ಕೆ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ಖಾಸಗಿ ಕಾಲೇಜು ಒಂದರಲ್ಲಿ ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವರುಣ್ ಮತ್ತು ಸುಧಾಕರ್ ಎಂಬಾತ ವಿರುಧಾಚಲಂ ಪಟ್ಟಣದ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಇಬ್ಬರು ಪ್ರೀತಿಸುತ್ತಿದ್ದರಿಂದ ಇಬ್ಬರ ನಡುವೆ ಸಮಸ್ಯೆ ಶುರುವಾಗಿದೆ.

ಇದಕ್ಕಾಗಿ ವರುಣ್ ಒಂದು ಗ್ಯಾಂಗ್ ಕಟ್ಟಿದರೆ, ಸುಧಾಕರ್ ಮತ್ತೊಂದು ಸ್ನೇಹಿತರ ಗ್ಯಾಂಗ್ ಅನನು ಕಟ್ಟಿದ್ದನು. ಒಂದು ಗ್ಯಾಂಗ್ ವರುಣ್‍ಗೆ ಸಪೋರ್ಟ್ ಮಾಡಿದರೆ, ಮತ್ತೊಂದು ಗ್ಯಾಂಗ್ ಸುಧಾಕರ್‌ಗೆ ಬೆಂಬಲಿಸುತ್ತಿತ್ತು. ಇದೀಗ ಪ್ರೀತಿ ವಿಚಾರಕ್ಕೆ ಈ ಎರಡು ಗ್ಯಾಂಗ್ ನಡುವೆ ಹೊಡೆದಾಟ ನಡೆದಿದೆ.

Leave a Reply

Your email address will not be published. Required fields are marked *

You may have missed

error: Content is protected !!