February 4, 2026

ಛತ್ ಪೂಜೆಯ ವೇಳೆ ಭಾರೀ ಬೆಂಕಿ ಅನಾಹುತ: 25 ಜನರಿಗೆ ಗಾಯ

0
image_editor_output_image-502100349-1667020191958.jpg

ಔರಂಗಬಾದ್‌: ಬಿಹಾರದ ಔರಂಗಬಾದ್ ಜಿಲ್ಲೆಯ ಮನೆಯೊಂದರಲ್ಲಿ ಶನಿವಾರ ಮುಂಜಾನೆ ಭಾರೀ ಬೆಂಕಿ ಅನಾಹುತವಾಗಿದ್ದು, ಕನಿಷ್ಠ 25 ಜನರು ಗಾಯಗೊಂಡಿದ್ದಾರೆ. ಹಲವರು ಗಂಭೀರಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಮಾಲೀಕ ಅನಿಲ್ ಗೋಸ್ವಾಮಿ ಅವರ ಕುಟುಂಬವು ಛತ್ ಪೂಜೆಗಾಗಿ ರಾತ್ರಿ 2.30ರ ಸುಮಾರಿನಲ್ಲಿ ಅಡುಗೆ ಮಾಡುತ್ತಿದ್ದಾಗ ಈ ದುರ್ಘಟನೆಯಾಗಿದೆ ಎಂದು ಅವರು ಹೇಳಿದರು.

ಅಗ್ನಿಶಾಮಕ ವಾಹನಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ಆದರೆ ಅಡುಗೆ ಅನಿಲ ಸಿಲಿಂಡರ್‌ಗಳು ಸ್ಫೋಟಗೊಂಡು ಬೆಂಕಿ ಮತ್ತಷ್ಟು ವ್ಯಾಪಿಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿಯ ಅವಘಡಕ್ಕೆ ಕಾರಣವೇನು ಎಂಬುದರ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!