ಚಹಾಕ್ಕೆ ಟೀ ಪುಡಿ ಬದಲು ಕ್ರಿಮಿನಾಶಕ ಪುಡಿ ಬಳಕೆ: ಇಬ್ಬರು ಮಕ್ಕಳು ಸೇರಿ ಐವರು ಸಾವು

ಉತ್ತರಪ್ರದೇಶ: ಉತ್ತರಪ್ರದೇಶದ ನಾಗ್ಲಾ ಕನ್ಹೈ ಗ್ರಾಮದಲ್ಲಿ ಭತ್ತದ ಬೆಳೆಗೆ ಸಿಂಪರಣೆ ಮಾಡಿದ ಔಷಧವನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಚಹಾ ಮಾಡಿದ ಪರಿಣಾಮ ಅದನ್ನು ಸೇವಿಸಿದ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಶಿವಾನಂದನ್ (35), ಅವರ ಮಕ್ಕಳಾದ ಶಿವಾಂಗ್ (6) ಮತ್ತು ದಿವ್ಯಾಂಶ್ (5), ಅವರ ಮಾವ ರವೀಂದ್ರ ಸಿಂಗ್ (55) ಮತ್ತು ನೆರೆಮನೆಯ ಸೋಬ್ರಾನ್ (42) ಎಂದು ಗುರುತಿಸಲಾಗಿದೆ.
ಇನ್ನು ನಾಗ್ಲಾ ಕನ್ಹೈ ಗ್ರಾಮದ ತಮ್ಮ ಮನೆಯಲ್ಲಿ ತಯಾರಿಸಿದ ಚಹಾ ಕುಡಿದ ಬಳಿಕ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.