ಉತ್ತರಪ್ರದೇಶದಲ್ಲಿ ನಡುರಸ್ತೆಯಲ್ಲೇ ಪೊಲೀಸ್ ಸಿಬ್ಬಂದಿಗೆ ಥಳಿಸಿದ ದುಷ್ಕರ್ಮಿಗಳು – ಓರ್ವ ಅರೆಸ್ಟ್
ನಾಲ್ವರು ದುಷ್ಕರ್ಮಿಗಳು ಪೊಲೀಸ್ ಸಿಬ್ಬಂದಿಗೆ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ.
ನಾಲ್ವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದು, ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪೊಲೀಸ್ ಪೇದೆಯನ್ನು ದಿವಾನ್ ಶ್ರೀಕಾಂತ್ ಎಂದು ಗುರುತಿಸಲಾಗಿದ್ದು, ನಾಲ್ವರು ತಮ್ಮ ಬೈಕ್‌ಗಳಲ್ಲಿ ಜೋರಾಗಿ ಶಬ್ಧ ಮಾಡಿ ಗಲಾಟೆ ಮಾಡುತ್ತಿದ್ದು, ಇದನ್ನು ತಡೆಯಲು ಬಂದ ಶ್ರೀಕಾಂತ್ ರನ್ನು ಥಳಿಸಿದ್ದಾರೆ ಎನ್ನಲಾಗಿದೆ.






