November 21, 2024

ಸ್ಟೀಲ್ ಟಿಫಿನ್ ಬಾಕ್ಸ್ ನಲ್ಲಿ ಮುಚ್ಚಿ ಪಟಾಕಿ ಸಿಡಿತ: ಛಿದ್ರಗೊಂಡ ಸ್ಟೀಲ್ ತುಂಡುಗಳು ದೇಹಕ್ಕೆ ಚುಚ್ಚಿ 19 ವರ್ಷದ ಯುವತಿ‌ ಸಾವು

0

ಮಂದಸೌರ್: ಪಟಾಕಿಯನ್ನು ಸ್ಟೀಲ್ ಟಿಫಿನ್ ಬಾಕ್ಸ್ ನಲ್ಲಿ ಮುಚ್ಚಿ ಸಿಡಿಸಿದ ಪರಿಣಾಮ ಛಿದ್ರಗೊಂಡ ಸ್ಟೀಲ್ ತುಂಡುಗಳು ದೇಹಕ್ಕೆ ಚುಚ್ಚಿದ್ದರಿಂದ 19 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಕಾರ್ಜು ಗ್ರಾಮದಲ್ಲಿ ನಡೆದಿದೆ.

ಮೃತ ಯುವತಿ ತನ್ನ ಮನೆಯ ಹೊರಗೆ ಪಟಾಕಿಗಳನ್ನು ಸಿಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಭೌಗಢ ಪೊಲೀಸ್ ಠಾಣೆಯ ಅಧಿಕಾರಿ ಅರವಿಂದ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಯುವತಿಯೂ ‘ಸುಟ್ಲಿ ಬಾಂಬ್’ (ಸೆಣಬಿನ ಹುರಿಯಿಂದ ಮಾಡಿದ ಪಟಾಕಿ)ಯನ್ನು ಉರಿಸಿ ಅದರ ಮೇಲೆ ತಲೆಕೆಳಗಾಗಿ ಸ್ಟೀಲ್ ಟಿಫಿನ್-ಬಾಕ್ಸ್ ಹಾಕಿದ್ದಾಳೆ. ಪಟಾಕಿ ಸಿಡಿಯುತ್ತಿದ್ದಂತೆ, ಸ್ಟೀಲ್ ಬಾಕ್ಸ್ ತುಂಡುಗಳಾಗಿ ಒಡೆದು ಅದರ ಚೂರುಗಳು ಆಕೆಯ ಹೊಟ್ಟೆ ದೇಹವನ್ನು ಪ್ರವೇಶಿಸಿದೆ

ಘಟನೆ ನಡೆದ ತಕ್ಷಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಅಲ್ಲಿಗೆ ಬರುವ ಮುನ್ನವೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!