February 4, 2026

ಬರಿಮಾರ್ : ಅಕ್ರಮ ಮರಳು ದಂಧೆ ಆರೋಪ: ಲಾರಿಗಳನ್ನು ತಡೆದು ಪ್ರತಿಭಟಿಸಿದ ಸಾರ್ವಜನಿಕರು

0
IMG-20221026-WA0007

ಬಂಟ್ವಾಳ: ಬರಿಮಾರಿನಲ್ಲಿ ಹೈಟೆಕ್‌ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಸಾರ್ವಜನಿಕರು ಲಾರಿಗಳನ್ನು ತಡೆ ಹಿಡಿದು ಪ್ರತಿಭಟಿಸಿದ್ದಾರೆ.

ಎಗ್ಗಿಲ್ಲದೆ ಮರಳು ಮಾಫಿಯಾ ನಡೆಯುತ್ತಿದ್ದು ಪಂ.ಅಧ್ಯಕ್ಷೆಯ ನೇತೃತ್ವದಲ್ಲಿ ಸ್ಥಳೀಯರು ಬರಿಮಾರಿನಲ್ಲಿ ಮರಳು ಲಾರಿಗಳನ್ನು ತಡೆದುಹಿಡಿದ್ದಾರೆ.

ಈ ವೇಳೆ ಲಾರಿ ತಡೆದ ಕಾರ್ಯಕರ್ತರಿಗೆ ಲಾರಿಗಳನ್ನು ಬಿಡುವಂತೆ ಬಿಜೆಪಿ ಮುಖಂಡರಿಂದಲೂ, ಪೊಲೀಸರಿಂದ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೋಟು, ಕ್ರೇನ್ ಬಳಸಿ ಹೈಟೆಕ್ ಮರಳು ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಗ್ರಾಮಸ್ಥರು ವಿವಿಧ ಇಲಾಖೆಗೆ ದೂರು ನೀಡಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!