February 3, 2026

ಬಂಟ್ವಾಳ: ಪಟಾಕಿ ಶಬ್ದಕ್ಕೆ ಬೆದರಿ ಓಡಿಹೋಗುವಾಗ ಬಾವಿಗೆ ಬಿದ್ದ ಶ್ವಾನ: ಅಗ್ನಿಶಾಮಕ ದಳದಿಂದ ರಕ್ಷಣೆ

0
IMG-20221025-WA0047.jpg

ದೀಪಾವಳಿಯ ಪಟಾಕಿ ಶಬ್ದಕ್ಕೆ ಬೆದರಿ ಓಡಿಹೋಗುವಾಗ ಬಾವಿಗೆ ಬಿದ್ದಿದ್ದ ಶ್ವಾನಕ್ಕೆ ಅಗ್ನಿಶಾಮಕ ಸಿಬಂದಿ ರಕ್ಷಿಸುವ ಮೂಲಕ ಮರು ಜೀವ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಸಮೀಪದ ಕುಂಜಿರಬೆಟ್ಟು ಎಂಬಲ್ಲಿ ಶ್ರೀಮತಿ ಸುಶೀಲಾರವರಿಗೆ ಸೇರಿದ ಬಾವಿಗೆ ಮಂಗಳವಾರ ಸಾಕು ನಾಯಿಯೊಂದು ಬಿದ್ದಿದ್ದು.ಬಳಿಕ ಬಂಟ್ವಾಳ ಅಗ್ನಿಶಾಮಕ ಠಾಣೆಯ ತಂಡ ಸ್ಥಳಕ್ಕೆ ತೆರಳಿ ರಕ್ಷಿಸುವ ಜತೆಗೆ ನೀರು ಕಲುಷಿತಗೊಳ್ಳುವುದನ್ನು ತಪ್ಪಿಸಿದೆ.

ಅಗ್ನಿಶಾಮಕ ಸಿಬ್ಬಂದಿ ಕಿರಣ್ ಕುಮಾರ್ ರವರು ಬಾವಿಗೆ ಇಳಿದು ನಾಯಿಯನ್ನು ಜೀವಂತವಾಗಿ ಮೇಲಕ್ಕೆತ್ತಿದ್ದಾರೆ.

ಬಂಟ್ವಾಳ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಯು.ರವೀಂದ್ರ, ಸಿಬ್ಬಂದಿ ಜಯ, ಪುರುಷೋತ್ತಮ, ರೋಹಿತ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಮತ್ತಿತರರು ಕಾರ್ಯಚರಣೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!