February 3, 2026

‘ಟಿ-20 ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಗೆದ್ದಿರೋದು ಕೆಲವರಿಗೆ ಬೇಸರ’ -ಕಲ್ಲಡ್ಕ ಪ್ರಭಾಕರ್ ಭಟ್

0
Dr-Kalladka-Prabhakar-Bhat-.jpg

ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹಾಗೂ ಭಾರತದ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಗೆದ್ದಿರುವುದು ಕೆಲ ಜನರಿಗೆ ಬೇಸರ ಆಗಿರಬಹುದು ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಆರ್‌ಎಸ್‌ಎಸ್ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿರುವುದು, ಪಾಕಿಸ್ತಾನ ಜಿಂದಾಬಾದ್ ಅಂತ ಹೇಳುವವರಿಗೆ ಬೇಸರ ಆಗಿರಬಹುದು. ಆ ರೀತಿಯ ಮಾನಸಿಕತೆ ಈ ದೇಶದಲ್ಲಿ ಕೆಲ ಮುಸ್ಲಿಮರಲ್ಲಿದೆ ಎಂದರು.

ಇನ್ನು ಭಾರತದಲ್ಲಿ ಒಳ್ಳೆಯ ಮುಸ್ಲಿಮರೂ ಇದ್ದಾರೆ. ದೇಶವನ್ನು ವಿರೋಧಿಸುವವರೂ ಇದ್ದಾರೆ. ದೇಶವನ್ನು ವಿರೋಧಿಸುವವರು ಯೋಚನೆ ಮಾಡುವಾಗ ಪಾಕಿಸ್ತಾನದ ಬಗ್ಗೆಯೇ ಯೋಚನೆ ಮಾಡುತ್ತಾರೆ ಎಂದಿದ್ದಾರೆ.

ಪಿಎಫ್‌ಐ ಹೆಸರಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕೊಲೆ ಪ್ರಯತ್ನ ಮಾಡ್ತಿತ್ತಿದ್ದು, ಪಥ ಸಂಚಲನ ಮಸೀದಿ ಮುಂದೆ ಹೋಗಬಾರದು ಅಂತ ಹೇಳ್ತಾರೆ. ಮಸೀದಿಗೆ ಜಾಗ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!