March 22, 2026

ಮೊಬೈಲ್‍ನಲ್ಲಿ ಬಳಕೆ ಮಾಡಬೇಡ ಎಂದ ತಾಯಿ: ಮನನೊಂದು ಮಗಳು ನೇಣುಬಿಗಿದು ಆತ್ಮಹತ್ಯೆ

0
image_editor_output_image1547130581-1666589936410.jpg

ಲಕ್ನೋ: ಮೊಬೈಲ್‍ನಲ್ಲಿ ಚಾಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಾಯಿ ಗದರಿದ್ದಕ್ಕೆ ಮನನೊಂದು ಹದಿಹರೆಯದ ಬಾಲಕಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ದೀಕ್ಷಾ (16) ಮೃತ ವಿದ್ಯಾರ್ಥಿನಿ. ಗಂಗಾಪುರ ಕಾಲೊನಿ ಪ್ರದೇಶದಲ್ಲಿನ ತನ್ನ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಕ್ಷಾ ಪತ್ತೆಯಾಗಿದ್ದಾಳೆ. ದೀಕ್ಷಾ ಶಾಲೆಯಿಂದ ಮನೆಗೆ ಹಿಂದಿರುಗಿದ ತಕ್ಷಣ ಮೊಬೈಲ್ ಹಿಡಿಕೊಂಡು ಚಾಟ್ ಮಾಡುತ್ತಾ ಕುಳಿತಿದ್ದಳು

ಈ ಹಿನ್ನೆಲೆಯಲ್ಲಿ ದೀಕ್ಷಾಳ ತಾಯಿ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳುತ್ತಿಯಾ ಎಂದು ಗದರಿದ್ದಾಳೆ. ಇದಾದ ನಂತರ ದೀಕ್ಷಾ ರಾತ್ರಿ ತನ್ನ ಕೋಠಡಿಗೆ ಹೋಗಿ ನೇಣು ಬಿಗಿದುಕೊಂಡಿದ್ದಾಳೆ. ಇದನ್ನು ನೋಡಿದ ದೀಕ್ಷಾಳ ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. 

Leave a Reply

Your email address will not be published. Required fields are marked *

error: Content is protected !!