March 22, 2026

ದೀಪಾವಳಿ ಹಬ್ಬದ ಬೋನಸ್ ನೀಡದ ಕಂಪೆನಿ: ಟವರ್ ಏರಿ ಪ್ರತಿಭಟನೆ ನಡೆಸಿದ ಕಾರ್ಮಿಕ

0
image_editor_output_image1590009189-1666506555420.jpg

ಶಹಾಬಾದ್: ನಗರದ ಜೆಪಿ ಸಿಮೆಂಟ್‌ ಕಾರ್ಖಾನೆಯವರು ದೀಪಾವಳಿ ಹಬ್ಬದ ಬೋನಸ್ ನೀಡಿಲ್ಲ ಎಂದು ಕಾರ್ಮಿಕರೊಬ್ಬರು ಕಾರ್ಖಾನೆಯ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ನಡೆದಿದೆ.

ಮಹ್ಮದ್ ರಶೀದ್ ಟವರ್ ಏರಿ ಪ್ರತಿಭಟನೆ ನಡೆಸಿದ ಕಾರ್ಮಿಕ. ಕಾರ್ಖಾನೆಯ ನಿಯಮದ ಪ್ರಕಾರ ದೀಪಾವಳಿಗೊಮ್ಮ ಕಾರ್ಮಿಕರಿಗೆ ಬೋನಸ್ ನೀಡಬೇಕು. ಆದರೆ ಈ ವರ್ಷ ಬೋನಸ್ ನೀಡಿಲ್ಲವೆಂದು ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಬೋನಸ್ ನೀಡುವವರೆಗೂ ಕೆಳಗೆ ಇಳಿಯುವುದಿಲ್ಲವೆಂದು ಎಂದ ಹಠ ಹಿಡಿದಿದ್ದರು ಎನ್ನಲಾಗಿದೆ. ಕಾರ್ಖಾನೆಯ ಅಧಿಕಾರಿಗಳು ತಿಳಿಹೇಳಿ ಕೆಳಗಿಳಿಸಿರುವುದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!