February 4, 2026

ಫೇಸ್‌ಬುಕ್‌ನಲ್ಲಿ ಮಹಿಳೆಯರಿಗೆ ಅಶ್ಲೀಲ ವೀಡಿಯೋ ಕಳುಹಿಸಿ ಕಿರುಕುಳ: ಆರೋಪಿಯ ಬಂಧಿಸಿ

0
image_editor_output_image376143043-1666421862910.jpg

ಬೆಂಗಳೂರು: ಖ್ಯಾತ ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್‌ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಗೆ ತೆರೆದು ಮಹಿಳೆಯರಿಗೆ ಅಶ್ಲೀಲ ಧ್ವನಿ ಸಂದೇಶ ಹಾಗೂ ಚಿತ್ರಗಳನ್ನು ಕಳುಹಿಸಿ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಉತ್ತರ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಕೆಂಚಿಕೊಪ್ಪದ ನಿವಾಸಿ ಜಗದೀಶ್‌ (32) ಬಂಧಿತ. ಈತ ನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಜಪ್ತಿ ಮಾಡಲಾಗಿದೆ.

ಲೈಂಗಿಕ ವಿಚಾರದಲ್ಲಿ ತೊಂದರೆ ಇರುವ ಮಹಿಳೆಯರಿಗೆ ತಿಳಿವಳಿಕೆ ನೀಡುವ ಸಲುವಾಗಿ ತಮ್ಮ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ತೆರೆದು ಅದರಮೂಲಕ ಲೈಂಗಿಕ ವಿಚಾರದಲ್ಲಿ ತೊಂದರೆ ಇರುವ ಮಹಿಳೆಯರಿಗೆ ಸಲಹೆ ನೀಡುತ್ತಿದ್ದರು.

ಈ ವಿಚಾರ ತಿಳಿದಿದ್ದ ಆರೋಪಿ ಜಗದೀಶ್‌ ಪದ್ಮಿನಿ ಪ್ರಸಾದ್‌ ಹೆಸರಿನಲ್ಲಿ ತಾನೇ ಸ್ವತಃ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಹಲವಾರು ಮಹಿಳೆಯರಿಗೆ ಅಸಭ್ಯವಾದ ಸಂದೇಶ ಕಳುಹಿಸಿದ್ದ. ಇದರ ಜತೆಗೆ ಧ್ವನಿ ಸಂದೇಶ ಹಾಗೂ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಕಿರುಕುಳ ಕೊಡುತ್ತಿದ್ದ.

ಆರೋಪಿಯ ಬಲೆಯ ಸುಳಿಗೆ ಸಿಲುಕಿದ್ದ ಹಲವು ಮಹಿಳೆಯರಿಗೆ ಈ ಬಗ್ಗೆ ಅನುಮಾನ ಬಂದು ಪದ್ಮಿನಿ ಪ್ರಸಾದ್‌ ಅವರಿಗೆ ಈ ಸಂಗತಿ ತಿಳಿಸಿದ್ದರು.

ಆತಂಕಗೊಂಡ ಪದ್ಮಿನಿ ಪ್ರಸಾದ್‌ ಉತ್ತರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಕಳೆದ ಫೆ.17ರಂದು ಈ ಕುರಿತು ದೂರು ನೀಡಿದ್ದರು.

ಈ ಬಗ್ಗೆ ಎಫ್ಐಆರ್‌ ದಾಖಲಿಸಿಕೊಂಡ ಉತ್ತರ ವಿಭಾಗದ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಜಗದೀಶ್‌ನ ಸುಳಿವು ಸಿಕ್ಕಿತ್ತು.

Leave a Reply

Your email address will not be published. Required fields are marked *

error: Content is protected !!