ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಪ್ಲಾಟ್‌ಫಾರಂ ಮೇಲೆ ಬಿದ್ದ ಮಹಿಳೆ
ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಮಹಿಳೆಯೊಬ್ಬರು ಆಯತಪ್ಪಿ ಪ್ಲಾಟ್‌ಫಾರಂ ಮೇಲೆ ಬಿದ್ದ ಘಟನೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ತಮ್ಮ ಸಂಬಂಧಿಕರನ್ನು ರೈಲಿಗೆ ಬಿಡಲು ಬಂದಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ರೈಲು ಚಲಿಸಲು ಆರಂಭವಾದ ಸಂದರ್ಭ ಮಹಿಳೆ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಪ್ಲಾಟ್‌ಫಾರಂ ಮೇಲೆ ಬಿದ್ದಿದ್ದಾರೆ. ಈ ವೇಳೆ ರೈಲ್ವೆ ಪೊಲೀಸರು ಹಾಗೂ ಆರ್ ಪಿಎಫ್ ಸಿಬ್ಬಂದಿಗಳು ಅಲ್ಲೇ ಇದ್ದ ಪರಿಣಾಮ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.





