ಉಪ್ಪಳ: ಶಾಲಾ ವಿಜ್ಞಾನ ಮೇಳದ ವೇಳೆ ಪೆಂಡಲ್ ಕುಸಿತ: ವಿದ್ಯಾರ್ಥಿಗಳಿಗೆ ಗಾಯ
ಕಾಸರಗೋಡು: ಕಾಸರಗೋಡು ಶಾಲಾ ವಿಜ್ಞಾನ ಮೇಳದ ವೇಳೆ ಪೆಂಡಲ್ ಕುಸಿದು ಬಿದ್ದು ಮಕ್ಕಳು ಗಾಯಗೊಂಡ ಘಟನೆ ಉಪ್ಪಳ ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.

ಮಂಜೇಶ್ವರಂ ಉಪಜಿಲ್ಲಾ ಪಂದ್ಯದ ವೇಳೆ ತಗಡಿನ ಹಾಳೆಯಿಂದ ನಿರ್ಮಿಸಲಾಗಿದ್ದ ಪೆಂಡಲ್ ಕುಸಿದಿದೆ. 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನಾಲ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೇಕೂರಿನ ಶಾಲೆಯಲ್ಲಿ ನಿನ್ನೆ ವಿಜ್ಞಾನ ಮೇಳ ಆರಂಭವಾಗಿದೆ.




