ಕೆಲವು ರಾಜ್ಯದಲ್ಲಿ ಪಟಾಕಿ ನಿಷೇಧ- ನಿರುದ್ಯೋಗಿಗಳಾದ ಲಕ್ಷಕ್ಕೂ ಅಧಿಕ ಮಂದಿ!
ಕೆಲವು ರಾಜ್ಯಗಳಲ್ಲಿ ಪಟಾಕಿ ನಿಷೇಧ ಮಾಡಿರುವುದರಿಂದ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ತಯಾರಿಕಾ ಉದ್ಯಮದಲ್ಲಿದ್ದ. ಸುಮಾರು 1.5 ಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ.
7 ಲಕ್ಷಕ್ಕೂ ಅಧಿಕ ಮಂದಿಗೆ ಪಟಾಕಿ ಉದ್ಯಮ ವಲಯವು ಉದ್ಯೋಗ ನೀಡಿದ್ದು, ಇದೀಗ ಪಟಾಕಿ ನಿಷೇಧದಿಂದ ಕಂಗಾಲಾಗಿದ್ದಾರೆ.

ಇನ್ನು 6.5 ಲಕ್ಷಕ್ಕೂ ಹೆಚ್ಚು ಶಿವಕಾಶಿಯ ಪಟಾಕಿ ತಯಾರಿಕ ಕುಟುಂಬಗಳಿಗೆ ಪಟಾಕಿ ಉದ್ಯಮವು ಆದಾಯದ ಮೂಲವಾಗಿದೆ. ಇದೀಗ ಪಟಾಕಿ ನಿಷೇಧ ಸೇರಿದಂತೆ ಇತ್ತೀಚಿನ ಬೆಳವಣಿಗೆಯಿಂದ 1.5 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.




