February 3, 2026

ಬಂಟ್ವಾಳ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ: ಮಾಣಿಯ ಬರಿಮಾರ್ ಗ್ರಾಮದಲ್ಲಿ ಘಟನೆ

0
image_editor_output_image-158204074-1666289599871

ಬಂಟ್ವಾಳ:  ತಾಯಿಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ತಾಲೂಕಿನ ಬರಿಮಾರು ಗ್ರಾಮದ ಗಾಣದಪಾಲು ಎಂಬಲ್ಲಿಂದ ವರದಿಯಾಗಿದೆ.

ಗಾಣದಪಾಲು ನಿವಾಸಿ ಪದ್ಮನಾಭ ಪೂಜಾರಿ ಅವರ ಧರ್ಮಪತ್ಮಿದೀಕ್ಷಿತಾ ಅವರು ಮೂರು ಮಕ್ಕಳಿಗೆ ಅ.19 ರಂದು ಮಧ್ಯಾಹ್ನ 12.45 ರ ವೇಳೆ ಜನ್ಮ ನೀಡಿದ್ದಾರೆ. ಪ್ರಸ್ತುತ ತಾಯಿ ಮತ್ತು ಮೂರು ಮಕ್ಕಳು ಆರೋಗ್ಯದಿಂದ್ದಾರೆ. ಮೊದಲು ಗಂಡು ಮಗುವಿಗೆ ಜನ್ಮ ನೀಡಿದ ಆಕೆ ಬಳಿಕ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ.ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಡಾ. ವಿನೀತ ಶೆಟ್ಟಿ ಅವರ ತಂಡ ಸಿಸೇರಿಯನ್ ಮೂಲಕ ಮಕ್ಕಳನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಮೂವರು ಮಕ್ಕಳ ತೂಕ ಕಡಿಮೆ ಇರುವುದರಿಂದ ಮಕ್ಕಳನ್ನು ಐಸಿಯು ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.‌ಕಳೆದ ಸುಮಾರು ಒಂದುವರೆ ತಿಂಗಳಿನಿಂದ ದೀಕ್ಷಿತಾ ಅವರನ್ನು ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ವಿಶೇಷ ಕಾಳಜಿಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ ನೋಡಿಕೊಂಡ ಸರಕಾರಿ ಆಸ್ಪತ್ರೆಯ ವೈದ್ಯರ ತಂಡಕ್ಕೆ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.ಬಡತನದಲ್ಲಿ ಜೀವನ ಸಾಗಿಸುವ, ಕೂಲಿ ಕಾರ್ಮಿಕ ಪದ್ಮನಾಭ ಪೂಜಾರಿ ಅವರ ಪತ್ಮಿ ದೀಕ್ಷಿತಾ ಮೂರು ಮಕ್ಕಳಿಗೆ ಜನ್ಮ ನೀಡಿದಾಗ ಮನೆಯಲ್ಲಿ ಸಂತಸ ಮೂಡಿದೆ, ಆದರೆ ಇನ್ನೊಂದು ಕಡೆ ಅವರ ಪೋಷಣೆಯ ಜವಾಬ್ದಾರಿ ಇವರ ಮೇಲೆ ಸವಾಲು ಆಗಬಹುದು. ಮಂಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ತಿಳಿಸಿದಂತೆ ಹೆರಿಗೆಗಾಗಿ ಒಂದುವರೆ ತಿಂಗಳ ಮೊದಲೇ ದಾಖಲಾಗಿದ್ದರು. ತೂಕ ಕಡಿಮೆ ಇರುವ ಕಾರಣಕ್ಕಾಗಿ ಇದೀಗ ಮೂರು ಮಕ್ಕಳನ್ನು ಐಸಿಯು ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!