ಅರಬ್ಬಿ ಸ್ಪೋರ್ಟ್ಸ್ ಎಫ್.ಎಫ್ ಸೀಸನ್-1 ಟ್ರೋಫಿ ಗೆದ್ದ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ

ಸೌದಿ ಅರೇಬಿಯಾ: ಇಲ್ಲಿನ ಬುರೈದದ ಅರಬ್ಬಿ ಸ್ಪೋರ್ಟ್ಸ್ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಕೂಟದಲ್ಲಿ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡವು ಅರಬ್ಬಿ ಟ್ರೋಪಿಯನ್ನು ತಮ್ಮದಾಗಿಸಿಕೊಂಡಿತು.
ಸೆಮಿ ಫೈನಲ್ ಪಂದ್ಯಾಟದಲ್ಲಿ ಹರಬ್ಬಿ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ ಜಾಬಿರ್ ಕೆಕನಾಜೆ ಹಾಗೂ ಶಾಫಿ ಪೆರುವಾಯಿ ಮಾಲಕತ್ವದ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡವು ಫೈನಲ್ ಪಂದ್ಯದಲ್ಲಿ ನಜಮ್ ಫ್ರೆಂಡ್ಸ್ ತಂಡದ ವಿರುದ್ಧ ಜಿದ್ದಾ ಜಿದ್ದಿನ ಹೋರಾಟ ನಡೆಸಿ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತು.

ಪಂದ್ಯಕೂಟದಲ್ಲಿ ಲೆಫ್ಟಿ ನವ್ವ @ನವಾಝ್ ಮತ್ತು ಶಫೀಕ್ ಅರ್ಲಪದವು ಅತ್ಯುತ್ತಮ ಹೊಡೆತಗಳ ಮೂಲಕ ಪ್ರೇಕ್ಷಕರ ಮನ ರಂಜಿಸಿದರು.