February 3, 2026

ಮಂಗಳೂರು: ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ : ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಬ್ಯಾಂಕ್ ಮ್ಯಾನೇಜರ್

0
image_editor_output_image1465163574-1665663680464

ಮಂಗಳೂರು :  ರಾಷ್ಟ್ರೀಕೃತ ಬ್ಯಾಂಕ್ ಒಂದರ ಮಹಿಳಾ ಮೆನೇಜರ್ ಜೀವಾಂತ್ಯಗೊಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 52 ವರ್ಷದ ಪದ್ಮಾವತಿ ಜೀವಾಂತ್ಯಗೊಳಿಸಿದ ಅಧಿಕಾರಿಯಾಗಿದ್ದು ಈಕೆ ಬ್ಯಾಂಕಿನ ಬಿಜೈ ಶಾಖೆಯಲ್ಲಿ ವ್ಯವಸ್ಥಾಪಕಿಯಾಗಿದ್ದರು ಎಂದು ತಿಳಿದು ಬಂದಿದೆ. ತಾನೂ ಇತ್ತೀಚೆಗಷ್ಟೇ ನಗರದ ಯೆಯ್ಯಾಡಿ ಬಳಿ ಖರೀದಿಸಿದ ಹೊಸ ಫ್ಲಾಟಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಪದ್ಮಾವತಿ MIT ಯಲ್ಲಿ ವ್ಯಾಸಾಂಗ ಮಾಡುತ್ತಿರುವ ಓರ್ವ ಮಗ ಹಾಗೂ ಪತಿಯನ್ನು ಅಗಲಿದ್ದಾರೆ.

ಬ್ಯಾಂಕಿನ ಹಿರಿ ಅಧಿಕಾರಿಗಳ ಕಿರುಕುಳವೇ ಪದ್ಮವತಿ ಸಾವಿಗೆ ಕಾರಣ ಎಂಬ ಮಾತುಗಳು ಆಕೆಯ ಆಪ್ತ ವಲಯದಲ್ಲಿ ಕೇಳಿ ಬರುತ್ತಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯೆಯ್ಯಾಡಿಯಲ್ಲಿ ಇತ್ತೀಚೆಗಷ್ಟೇ ಹೊಸ ಫ್ಲ್ಯಾಟ್ ಖರೀದಿಸಿದ ಪದ್ಮಾವತಿ  ಬ್ಯಾಂಕಿನ ಕೀಗಳನ್ನು ಗಂಡನ ಬಳಿ ಕಳಿಸಿಕೊಟ್ಟಿದ್ದರು ಮತ್ತು ನೈಲನ್ ದಾರದ ಬಗ್ಗೆ ವಿಚಾರಿಸಿದ್ದರು. ಆಕೆಯ ತಂಗಿ ನಿನ್ನೆ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ ಪರಿಶೀಲನೆ ಮಾಡಿದಾಗ ಆಕೆ ನೂತನವಾಗಿ ಖರೀದಿಸಿದ ಫ್ಲಾಟಿನ ಫ್ಯಾನಿಗೆ ಆಗಲೇ ಕೊರಳೊಡ್ಡಿಯಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!