February 2, 2026

ವಿಶ್ವವಿದ್ಯಾಲಯನಿಂದ ಎಡವಟ್ಟು: ಹಾಲ್ ಟಿಕೆಟ್‍ನಲ್ಲಿ ವಿದ್ಯಾರ್ಥಿನಿ ಫೋಟೊ ಬದಲು ಐಶ್ವರ್ಯ ರೈ ಫೋಟೊ

0
image_editor_output_image679334110-1665467161691.jpg

ರಾಂಚಿ: ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ಹಾಲ್ ಟಿಕೆಟ್‍ನಲ್ಲಿ ವಿದ್ಯಾರ್ಥಿನಿ ಫೋಟೋ ಬದಲು ಐಶ್ವರ್ಯ ರೈ ಫೋಟೋ ಇರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

ಜಾರ್ಖಂಡ್‍ನ ಧನ್‍ಬಾದ್‍ನ ಬಿನೋದ್ ಬಿಹಾರಿ ಮಹ್ತೋ ಕೊಯಲಾಂಚಲ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯ ಬದಲು ನಟಿ ಐಶ್ವರ್ಯ ರೈ ಫೋಟೋವನ್ನು ಹಾಲ್ ಟಿಕೆಟ್‍ನಲ್ಲಿ ಹಾಕಿದ್ದರು.

ಈ ಹಿನ್ನೆಲೆಯಲ್ಲಿ ದಂಗಾದ ವಿದ್ಯಾರ್ಥಿನಿಯು ಕುಲಪತಿ ಎಸ್.ಕೆ. ಬರನ್‍ವಾಲ್ ಬಳಿ ಪರಿಹಾರವನ್ನು ಕೇಳಿದ್ದಾಳೆ. ಆ ವೇಳೆ ಹಾಲ್ ಟಿಕೆಟ್‍ನ ಫೋಟೋ ಹಾಗೂ ಸಹಿಗಳನ್ನು ಅಪ್‍ಲೋಡ್ ಮಾಡುವುದು ವಿಶ್ವವಿದ್ಯಾಲಯದಿಂದ ಮಾಡುತ್ತಿಲ್ಲ ಎಂದ ಅವರು, ಇದು ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ತರುವ ಸಂಚಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!