ವಿಟ್ಲ: ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದ್ ಮೀಲಾದ್ ಆಚರಣೆ
ವಿಟ್ಲ; ವಿಶ್ವ ಪ್ರವಾದಿ ಮಹಮ್ಮದ್ (ಸ.ಅ) ರವರ ಜನ್ಮ ದಿನಾಚರಣೆಯ ಈದ್ ಮಿಲಾದ್ ನ್ನು ವಿಟ್ಲ ಕೇಂದ್ರ ಜುಮಾ ಮಸೀದಿಯ ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ರಾದ ಇಕ್ಬಾಲ್ ಶೀತಲ್ ಧ್ವಜಾರೋಹಣ ಮಾಡಿದರು.
ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಸ್ಪರ್ಧೆಗಳು ನಡೆದುವು.
ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಕುಂಞಿ , ಕಾರ್ಯದರ್ಶಿ ಹಮೀದ್ ಬದ್ರಿಯಾ,ಜತೆ ಕಾರ್ಯದರ್ಶಿ ಹಮೀದ್ ಕುರುಂಬಳ,ಕೋಶಾದಿಕಾರಿ ಶೆರೀಫ್ ಪೊನ್ನೋಟು,ಲೆಕ್ಕಪರಿಶೋಧಕರಾದ ಇಸ್ಮಾಯಿಲ್ ಪರ್ತಿಪ್ಪಾಡಿ ,ವಿ.ಎ..ರಶೀದ್,ಸದಸ್ಯರಾದ ಹಮೀದ್, ವಿ.ಕೆ.ಎಂ. ಹಂಝ,ರಫೀಕ್ ಪೊನ್ನೋಟು, ಯೂಸೂಫ್ ಗಮಿ,ಅಶ್ರಫ್ ಕುಂಡಡ್ಕ,ಮಹಮ್ಮದ್ ಕಾಶಿಮಠ,,ಅಬೂಬಕರ್ ಅನಿಲಕಟ್ಟೆ,ಮಹಮ್ಮದ್ ಗಮಿ ಹಾಗೂ ಮದರಸದ ಅಧ್ಯಾಪಕ ವೃಂದದದವರು ಉಪಸ್ಥಿತರಿದ್ದರು.



