March 23, 2026

ಹುಡುಗಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಭ್ಯವಾಗಿ ಕಾಮೆಂಟ್‌ ಮಾಡಿದ ಯುವಕರಿಬ್ಬರ ಕೊಲೆ

0
image_editor_output_image-594793285-1665122298227.jpg

ದೆಹಲಿ: ದೆಹಲಿಯಲ್ಲಿ ಹುಡುಗಿಯೊಬ್ಬಳ ರೀಲ್ಸ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಭ್ಯವಾಗಿ ಕಾಮೆಂಟ್‌ ಮಾಡಿದ್ದು, ಇದರಿಂದ ಯುವಕರಿಬ್ಬರ ಕೊಲೆಗೆ ಕಾರಣವಾಗಿದೆ.

ದೆಹಲಿಯ ಭಾಲ್ಸ್ವಾ ಡೈರಿಯ ಮುಕಂದಪುರ ಭಾಗ 2 ಪ್ರದೇಶದ ನಿವಾಸಿಗಳಾದ ಇಬ್ಬರು ಯುವಕರು ಹುಡುಗಿಯೊಬ್ಬಳ ರೀಲ್ಸ್‌ಗೆ ಅಸಭ್ಯವಾಗಿ ಕಾಮೆಂಟ್‌ ಮಾಡಿದ್ದು, ಇದರಿಂದ ಕೋಪಗೊಂಡ ಯುವತಿ ಕಾಮೆಂಟ್‌ ಮಾಡಿದ ಯುವಕರಿಗೆ ಫೋನ್ ಕರೆ ಮಾಡಿ ಭೇಟಿಯಾಗಲು ತಿಳಿಸಿದ್ದಾಳೆ. ಅವಳ ಮಾತು ಕೇಳಿ ಆಕೆ ಹೇಳಿದ ಸ್ಥಳಕ್ಕೆ ಬಂದ ಯುವಕರು ಯುವತಿಯನ್ನು ಭೇಟಿಯಾಗಿದ್ದಾರೆ.

ಇನ್ನು ಈ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್‌ ಮಾಡಿದ ವಿಚಾರಕ್ಕೆ ಜಗಳವಾಗಿದ್ದು, ಯುವತಿ ಹಾಗೂ ಆಕೆಯ ಜೊತೆ ಬಂದಿದ್ದ ಸ್ನೇಹಿತರು ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!