ಮಸೀದಿಯ ಮೇಲಿನ ಗುಮ್ಮಟದಲ್ಲಿದ್ದ ಚಿನ್ನದ ಭಾಗ ಕಳವು
ಭೋಪಾಲ್: ಇಲ್ಲಿನ ತಲೈಯಾ ಪ್ರದೇಶದ ಐತಿಹಾಸಿಕ ಮೋತಿ ಮಸೀದಿಯ ಮೇಲಿನ ಗುಮ್ಮಟದ ಚಿನ್ನದ ಲೇಪಿತ ಒಂದು ಭಾಗವನ್ನು ಗುರುವಾರ ನಸುಕಿನಲ್ಲಿ ಕಳವು ಮಾಡಲಾಗಿದೆ.
ಗುಮ್ಮಟದ ಭಾಗಕ್ಕೆ ಅಲಂಕಾರ ಮಾಡಲಾಗಿದ್ದ ಏಳು ಅಡಿ ಎತ್ತರದ ಚಿನ್ನ ಲೇಪಿತ ಭಾಗ ಕಳ್ಳತನವಾಗಿದೆ. ಕಳ್ಳರು ಇಡೀ ವಸ್ತುವನ್ನು ಸಾಗಿಸಲು ಸಾಧ್ಯವಾಗದೇ ಒಂದು ಭಾಗವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಉಳಿದ ಭಾಗವನ್ನು ಛಾವಣಿಯ ಮೇಲೆಯೇ ಬಿಟ್ಟಿದ್ದಾರೆ.
ಕಳ್ಳರ ಕೃತ್ಯಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಪೊಲೀಸರಿಗೆ ಇನ್ನೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಕಳ್ಳರನ್ನು ಗುರುತಿಸಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.
ಸೆಕ್ಯೂರಿಟಿ ಮೊಹಮ್ಮದ್ ಲಯೀಕ್ (50), ಅವರು ಮತ್ತು ಅವರ ಸಹೋದ್ಯೋಗಿಗಳು ಗುರುವಾರ ಬೆಳಗ್ಗೆ ನಮಾಜ್ ಸಲ್ಲಿಸಿದ ನಂತರ ಮಲಗಿದ್ದರು. ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಸೀದಿಯ ಮುಂಭಾಗದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ನಮ್ಮನ್ನು ಎಚ್ಚರಿಸಿ ಕಳ್ಳತನವಾಗಿರುವ ಬಗ್ಗೆ ತಿಳಿಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.




