ಉಡುಪಿ: ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ತಲವಾರು ಪ್ರದರ್ಶನ: ಪ್ರಕರಣ ದಾಖಲಿಸಲು ಒತ್ತಾಯ
ಉಡುಪಿ: ನಗರದಲ್ಲಿ ನಡೆದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ತಲವಾರು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಇಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಅವರಿಗೆ ದೂರು ಸಲ್ಲಿಸಿದರು.
ದುರ್ಗಾ ದೌಡ್ ನಲ್ಲಿ ಅಕ್ರಮವಾಗಿ ತಲವಾರು ಪ್ರದರ್ಶನ ಮಾಡುವುದರೊಂದಿಗೆ ಶ್ರೀಕಾಂತ್ ಶೆಟ್ಟಿ ಮತ್ತು ಕಾಜಲ್ ಹಿಂದುಸ್ತಾನಿ ಪ್ರಚೋದನಕಾರಿಯಾಗಿ ಮಾತನಾಡಿ ಉಡುಪಿಯ ಶಾಂತಿಯುತ ವಾತಾವರಣ ಕೆಡಿಸಲು ಯತ್ನಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಘಟನೆಯು ಪೂರ್ವ ಯೋಜಿತವಾಗಿದ್ದು ಮತ್ತು ಸಮಾಜದ ನಿರ್ದಿಷ್ಟ ವರ್ಗದ ಜನರ ವಿರುದ್ದ ಅಪರಾಧ ಎಸಗಲು ಪ್ರೇರೇಪಿಸುವಂತಿತ್ತು ಎಂದು ಸಂಘಟನೆಗಳು ಆರೋಪಿಸಿವೆ.ಈ ಸಂದರ್ಭದಲ್ಲಿ ದಲಿತ ದಮನಿತ ಹೋರಾಟ ಸಮಿತಿಯ ಶ್ಯಾಮರಾಜ್ ಬಿರ್ತಿ, ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್,ಎಪಿಸಿಆರ್ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ, ಸುನ್ನಿ ಸಂಯುಕ್ತ ಜಮಾಅತಿನ ಜಿಲ್ಲಾಧ್ಯಕ್ಷ ಅಬುಬಕ್ಕರ್ ನೇಜಾರ್, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಕ್ರೈಸ ಮುಖಂಡ ಚಾರ್ಲ್ಸ್ ಅಂಬ್ಲರ್, ವಿಲಿಯಂ ಮಾರ್ಟಿಸ್, ಸಿ.ಪಿ.ಎಮ್ ಮುಖಂಡ ಬಾಲಕೃಷ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಫಣಿರಾಜ್,ಸಾಲಿಡಾರಿಟಿಯ ಅಫ್ವಾನ್ ಹೂಡೆ, ಮಂಜುನಾಥ್ ಬಾಳ್ಕುದ್ರು,ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷ ಇದ್ರಿಸ್ ಹೂಡೆ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಉಪಸ್ಥಿತರಿದ್ದರು.






