ಕಾಸರಗೋಡು: ಬೈಕ್ ಗೆ ಲಾರಿ ಡಿಕ್ಕಿ ಬೈಕ್ ಸವಾರ ಮೃತ್ಯು:ನವರಾತ್ರಿ ಕಾರ್ಯಕ್ರಮ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆ ಘಟನೆ
ಕಾಸರಗೋಡು: ಬೈಕ್ ಗೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಪಾಲಕುನ್ನುನಲ್ಲಿ ಬುಧವಾರ ನಡೆದಿದೆ.
ಆನೂರಿನ ಸಿ. ಪಿ. ಪ್ರಶಾಂತ್ ರವರ ಪುತ್ರ ಕರುಣ್(19) ಮೃತ ಪಟ್ಟವರು. ಜೊತೆಗಿದ್ದ ಅಭಿನಂದನ್(16) ಗಂಭೀರ ಗಾಯಗೊಂಡಿದ್ದು, ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ.
ಮೂಕಾಂಬಿಕ ಕ್ಷೇತ್ರದಲ್ಲಿ ನಡೆದ ನವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಈ ಅವಘಡ ನಡೆದಿದೆ.






