ಬಂದೂಕು, ಚಾಕುಗಳಿಗೆ ಆಯುಧ ಪೂಜೆ ಸಲ್ಲಿಸಿದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್
ಉಡುಪಿ: ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಆಯುಧ ಪೂಜೆಯಂದು ಬಂದೂಕು, ಚಾಕುಗಳಿಗೆ ಪೂಜೆ ಸಲ್ಲಿಸುವ ಮೂಲಕ ಮತ್ತೊಂದು ವಿವಾದವನ್ನು ಎಬ್ಬಿಸಿದ್ದಾರೆ.
ಉಡುಪಿಯ ಶ್ರೀರಾಮ ಸೇನೆ ವಲಯಾಧ್ಯಕ್ಷ ಮೋಹನ್ ಭಟ್ ಅವರ ಮನೆಯಲ್ಲಿ ಆಯುಧ ಪೂಜೆ ಅಂಗವಾಗಿ ಮುತಾಲಿಕ್ ಅವರು ಎರಡು ಬಂದೂಕು, ಚಾಕುಗಳಿಗೆ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಭಾರತದ ಉಳಿವಿಗಾಗಿ ಈ ಪೂಜೆಯನ್ನು ಮಾಡಿದ್ದೇವೆ. ಭಾರತದ ಉಳಿವಿಗಾಗಿ ಪ್ರತಿಯೊಬ್ಬರೂ ಭಾರತ ಮಾತೆಯನ್ನು ಉಳಿಸುವ ಕ್ಷಾತ್ರತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಮೋಹನ್ ಭಟ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.