April 15, 2025

ಪಿಎಫ್ಐ ಸಂಘಟನೆಯ ಏಳು ಮುಖಂಡರಿಗೆ ಷರತ್ತುಬದ್ಧ ಜಾಮೀನು

0

ಬೆಳಗಾವಿ: ಎಸ್‌ಡಿಪಿಐ ಹಾಗೂ ‌ನಿಷೇಧಿತ ಪಿಎಫ್ಐ ಸಂಘಟನೆಯ ಏಳು ಮುಖಂಡರಿಗೆ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಬೆಳಗಾವಿ ಕಾನೂನು ‌ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ‌ಗಡಾಡಿ ಅವರು ಆರೋಪಿಗಳಿಂದ ತಲಾ ₹ 50 ಸಾವಿರದ ಬಾಂಡ್‌ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.

ಆಜಂ ನಗರ ನಿವಾಸಿಗಳಾದ ಪಿಎಫ್‌ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಝಕೀವುಲ್ಲಾ ಫೈಜಿ, ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರದ ಪಿಎಫ್‌ಐ ಕಾರ್ಯಕರ್ತರಾದ ಸಲಾವುದ್ದೀನ್ ಖಿಲ್ಲೇವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ, ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್‌ ಜಾಮೀನು ಸಿಕ್ಕವರು.

 

 

ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನು ಸೆ. 27ರಂದು ಬಂಧಿಸಲಾಗಿತ್ತು. ಎಲ್ಲ ಮೇಲೂ ಸಿಆರ್‌ಪಿಸಿ 110 ಕಲಂ ಅಡಿ ‍ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!