ನೆಲ್ಯಾಡಿ; ಶಾರ್ಟ್ ಸರ್ಕ್ಯೂಟ್ ಕಾರು ಭಸ್ಮ: ಪುತ್ತೂರು ಮೂಲದ ಕಾರು
ನೆಲ್ಯಾಡಿ : ಸ್ವಿಫ್ಟ್ ಕಾರೊಂದರ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಕಾರಣ ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಸರಕಾರಿ ಶಾಲೆಯ ಬಳಿ ಅ.1ರ ರಾತ್ರಿ ಸಂಭವಿಸಿದೆ.
ಕಾರಿನಲ್ಲಿ ಪುತ್ತೂರು ಮೂಲದ ಗೋಕುಲದಾಸ ಹಾಗೂ ಮೆಲ್ವಿನ್ ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ಪ್ರಯಾಣಿಕರಿಬ್ಬರೂ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.