ಉಡುಪಿ: ಮಸೀದಿಯಿಂದ ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ
ಉಡುಪಿ: ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ಸಾಗುತ್ತಿದ್ದ ವೇಳೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಹೈಕಾಡಿಯ ನೊರುಲ್ಹಾ ಎಂಬವರು ಉಡುಪಿಯ ಶಂಕರ ನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೂರುಲ್ಹಾ ಅವರಿಗೆ ಅಜೀಮ್ ಎಂಬಾತ ಯಾವಾಗಲೂ ತೊಂದರೆ ಮಾಡುತ್ತಿದ್ದ. ನಿನ್ನೆ ಕೂಡಾ ನೂರುಲ್ಹಾ ಅವರು ಬ್ರಹ್ಮಾವರದ ಹಿಲಿಯಾಣದ ಹೈಕಾಡಿಯ ಮಸೀದಿಗೆ ಹೋಗಿ ಪ್ರಾರ್ಥನೆ ಮುಗಿಸಿ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಅಜೀಮ್ ಹೊಡೆದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.