February 2, 2026

ಕಾರು ಕಳವು ಮಾಡುತ್ತಿದ್ದ ದಂಪತಿಯ ಬಂಧನ

0
image_editor_output_image-650918364-1664267749235.jpg

ಬೆಂಗಳೂರು: ಬಾಡಿಗೆಗೆ ಕಾರು ಬುಕ್‌ ಮಾಡಿ ಚಾಲಕನಿಗೆ ಕಂಠಮಟ್ಟ ಮದ್ಯಪಾನ ಮಾಡಿಸಿ ಕಾರಿನೊಂದಿಗೆ ಪರಾರಿಯಾಗಿದ್ದ ದಂಪತಿಯನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ನಿವಾಸಿ ಮಂಜುನಾಥ್‌ (27), ಆತನ ಪತ್ನಿ ವೇದಾವತಿ (25) ಬಂಧಿತರು. ಬಂಧಿತರಿಂದ ಇಟಿಯೋಸ್‌ ಕಾರು, 2 ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ದಂಪತಿ ಕದ್ದ ಕಾರನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು.

ಇವರು ಇತ್ತೀಚೆಗೆ ಬಾಡಿಗೆ ಮನೆಯಲ್ಲಿ ತೊರೆದಿದ್ದರು. ಉಳಿದುಕೊಳ್ಳಲು ಮನೆ ಇರಲಿಲ್ಲ. ಹೀಗಾಗಿ ಕದ್ದ ಕಾರಿನಲ್ಲಿ ನಗರಾದ್ಯಂತ ಸುತ್ತಾಡುತಾ. ರಾತ್ರಿ ಹೊತ್ತು ಅದರಲ್ಲೇ ಮಲಗುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!