September 27, 2026

ಸುರತ್ಕಲ್: ಬಾಲಕನನ್ನು ಕಿಡ್ನಾಪ್ ಮಾಡಿ ಮೊಬೈಲ್‌, ಹಣ ದರೋಡೆ

0
image_editor_output_image-941202684-1664260597732.jpg

ಸುರತ್ಕಲ್: ಸಮೀಪದ ಪೆಲತ್ತೂರುವಿನಲ್ಲಿ 16ರ ಹರೆಯದ ಬಾಲಕನನ್ನು ಕಿಡ್ನಾಪ್ ಮಾಡಿದ್ದ ಗಾಂಜಾ ಗ್ಯಾಂಗ್ ನ ಸದಸ್ಯರು , ಬಾಲಕನಿಂದ ಮೊಬೈಲ್‌ ಹಾಗೂ ಹಣ ದರೋಡೆ ಮಾಡಿ ಬೆದರಿಕೆ ಒಡ್ಡಿರುವ ಬಗ್ಗೆ ಸುರತ್ಕಲ್‌ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್‌ ಶೆಟ್ಟಿ (24) ಮತ್ತು ಚೇತನ್‌ (23) ಬಂಧಿತರು.

 

ಪೆಲತ್ತೂರು ಬಳಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ಬಾಲಕ ಗಾಯಗೊಂಡು ಬಿದ್ದಿದ್ದು, ಆ ಬಾಲಕನ ಬಳಿ ಸಹಾಯ ಕೇಳಿ ದ್ವಿಚಕ್ರ ವಾಹನ ಹತ್ತಿದ್ದು ಬಳಿಕ ಬಾಲಕನನ್ನು ಎಟಿಎಂಗೆ ಕರೆದೊಯ್ದು ಹಣ ಡ್ರಾ ಮಾಡಿ ಬಾರ್‌ಗೆ ಕರೆದೊಯ್ದು ಆತನ ಹಣದಲ್ಲೇ ಮದ್ಯ ಸೇವಿಸಿದ್ದಾರೆ. ಬಳಿಕ ಮೊಬೈಲ್‌ ದರೋಡೆ ಮಾಡಿ ಬೆದರಿಕೆ ಹಾಕಿ ಪರಾರಿಯಾಗಿದ್ದಾಗಿ ಸುರತ್ಕಲ್‌ ಪೊಲೀಸರಿಗೆ ದೂರು ನೀಡಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!