December 12, 2024

ಮಂಗಳೂರಿನಲ್ಲಿ ಮತ್ತೆ ಹಲವು ಕಾರ್ಯಕರ್ತರು ಪೊಲೀಸ್ ವಶಕ್ಕೆ

0

ಮಂಗಳೂರಿನಲ್ಲಿ ಮತ್ತೆ ಹಲವು ಪಿಎಫ್ ಐ ಕಾರ್ಯಕರ್ತರನ್ನು  ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಇದು ರೈಡ್ ಅಲ್ಲ. ಮುಂಜಾಗ್ರತ ಕ್ರಮವಾಗಿ ವಶಕ್ಕೆ ಪಡೆದಿದ್ದೇವೆ ಎಂದು ಮಂಗಳೂರು ಕಮಿಷನರ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರು ಪೊಲೀಸರು ತಡರಾತ್ರಿ ಹಲವು ಪಿಎಫ್ ಐ ಕಾರ್ಯಕರ್ತರ ವಶಕ್ಕೆ ಪಡೆದಿದ್ದಾರೆ.

ಇಸ್ಮಾಯಿಲ್ ಎಂಜಿನೀರ್ ಬಜ್ಪೆ, ಷರೀಫ್ ಪಾಂಡೇಶ್ವರ,ಇಕ್ಬಾಲ್ ಕೆತ್ತಿಕಲ್, ನೌಷಾದ್ ಸುರತ್ಕಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

 

 

ಪಿಎಫ್ಐ ನಾಯಕರ ಬಂಧನ ಖಂಡಿಸಿ ಪ್ರತಿಭಟಿಸಿದವರ ಮೇಲೆ 107 ಸೆಕ್ಷನ್ ವಿಧಿಸಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!