ತಾಂಟ್ರೆ ಬಾ ತಾಂಟ್ ಎಂದವರ ನಿಜ ಬಣ್ಣ ಬಯಲಾಗುತ್ತಿದೆ- ಹೆಡೆಮುರಿ ಕಟ್ಟಲಾಗುತ್ತಿದೆ: ಮಂಗಳೂರಿನಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ
ಮಂಗಳೂರು : ದೇಶದ ಭದ್ರತಾ ತಂಡ ಎನ್ ಐ ಎ ದೇಶದಾದ್ಯಂತ ದಾಳಿ ನಡೆಸಿ ದೇಶದ್ರೋಹದಲ್ಲಿ ತೊಡಗಿದವರ ಹೆಡೆ ಮುರಿ ಕಟ್ಟಲು ಆರಂಭಿಸಿದ್ದು ತಾಂಟ್ರೆ ಬಾ ತಾಂಟ್ ಎಂದವರ ನಿಜ ಬಣ್ಣ ಬಯಲಾಗುತ್ತಿದೆ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ಗುಡುಗಿದ್ದಾರೆ.
ಅಡ್ಯಾರ್ ಗಾರ್ಡ್ ನಲ್ಲಿ ಜರಗಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತತ್ವ ಸಿದ್ದಾಂತ ವನ್ನು ರೂಪಿಸಿದ ಪಂಡಿತ್ ದೀನ್ ದಯಾಳ್ ಅವರು ಜನಸಂಘದಿಂದಲೇ ಪಕ್ಷದ ಶಿಸ್ತಿಗೆ ಭದ್ರಬುನಾದಿ ಹಾಕಿದ ಮಹಾನ್ ಚಿಂತಕ . ಅಭ್ಯಾಸ ವರ್ಗದ ಮೂಲಕ ಮೌಲ್ಯಾಧಾರಿತ ರಾಜಕೀಯ ವ್ಯವಸ್ಥೆ ಗೆ ಅಡಿಪಾಯ ಹಾಕಿದರು.
ಸಂಯಮ,ಬುದ್ದಿಮತ್ತೆ,ಜನರ ನಾಡಿಮಿಡಿತ ಅರಿತು ಜನರ ಸೇವಾ ಕಾರ್ಯಕ್ಕೆ ಮುಂದಾದಾಗ ಯಶಸ್ಸು ಸಾಧ್ಯ ಎಂದು ನಿರೂಪಿಸಿದವರು.
ಹಿಂದುತ್ವ ಬಿಜೆಪಿಯ ಆತ್ಮವಾಗಿದೆ.ಇದನ್ನು ಯಾವುದೇ ಕಾರಣಕ್ಕೂ ಬದಿಗೆ ಸರಿಸಿ ನಾವು ರಾಜಕೀಯ ಮಾಡುವ ಪಕ್ಷವಲ್ಲ .ಹಿಂದುತ್ವ ಮಣ್ಣಿನ ಸಂಸ್ಕಾರವಾಗಿದೆ.ಇದಕ್ಕೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತ ಪಡಿಸುತ್ತಾ ಬರುತ್ತಿದೆ.ಇದು ಓಲೈಕೆ ರಾಜಕಾರಣವಾಗಿದೆ .ಇದನ್ನು ನಾವು ಅರ್ಥ ಮಾಡಿಕೊಳ್ಳ ಬೇಕಿದೆ ಎಂದು ಕಿವಿಮಾತು ಹೇಳಿದರು.
ದೇಶದ ಭದ್ರತಾ ತಂಡ ಎನ್ ಐ ಎ ದೇಶದಾದ್ಯಂತ ದಾಳಿ ನಡೆಸಿ ದೇಶದ್ರೋಹದಲ್ಲಿ ತೊಡಗಿದವರ ಹೆಡೆ ಮುರಿ ಕಟ್ಟಲು ಮುಂದಾಗಿದೆ.
ತಾಂಟ್ರೆ ತಾಂಟ್ ಬಾ ಎಂದವರ ನಿಜ ಬಣ್ಣ ಬಯಲಾಗುತ್ತಿದೆ .
ಬಿಜೆಪಿ ಏಂಜಟ್ ಈ ಪಕ್ಷಗಳು ಎಂದವರಿಗೆ ಸೂಕ್ತ ಉತ್ತರ ನೀಡಲಾಗಿದೆ.
ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಇಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ ಎಂದರು.
ರಾಷ್ಟ್ರೀಯ ಸವಾಯೋಜನೆ 2020 – 21 ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಪುರಸ್ಕೃತರಾದ ರಶ್ಮಿ ಜೆ ಅಂಚನ್ ಅವರನ್ನು ಶಾಸಕರು ಸನ್ಮಾನಿಸಿದರು.
ಪ್ರಕಾಶ್ ಮಲ್ಪೆ ಅವರು ಪಂಡಿತ್ ದೀನ್ ದಯಾಳ್ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.
ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ದ.ಕ ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ ,ದ.ಕ ಜಿಲ್ಲೆಯ ಪ್ರ.ಕಾ ಸುಧೀರ್ ಶೆಟ್ಟಿ ಕಾಣ್ಣೂರು,ಮೇಯರ್ ಜಯಾನಂದ ಅಂಚನ್,ಉಮ ಮೇಯರ್ ಪೂರ್ಣಿಮಾ ,ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ,ಮಂಗಳೂರು ನಗರ ಉತ್ತರ ಮಂಡಲ ಪ್ರ.ಕಾ ಸಂದೀಪ್ ಪಚ್ಚನಾಡಿ,ರಾಜೇಶ್ ಕೊಟ್ಟಾರಿ ಶಕ್ತಿ ಕೇಂದ್ರದ ಅಜಿತ್ ಶೆಟ್ಟಿ ಸಚಿನ್ ಹೆಗ್ಡೆ ,ಪಾಲಿಕೆ ಸದಸ್ಯರು,ಪಂಚಾಯತ್ ಅಧ್ಯಕ್ಷರು,ಸದಸ್ಯರು,ಮಂಡಲ,ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.