ಬಾವಿಗೆ ಬಿದ್ದು ಮುಖ್ಯಪೇದೆ ಸಾವು
ಕನಕಗಿರಿ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ, ಶಿವಪುತ್ರಪ್ಪ ಗುಳೇದಗುಡ್ಡ(೪೦) ಸ್ಥಳೀಯ ಐತಿಹಾಸಿಕ ಸ್ಮಾರಕ ವೆಂಕಟಪತಿ ಬಾವಿಯಲ್ಲಿ ಬಿದ್ದು ಸಾವನ್ನೊಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಎ.ಪಿ.ಎಂ.ಸಿ ಆವರಣದಲ್ಲಿರುವ ವೆಂಕಟಪತಿ ಬಾವಿಯ ಕಡೆ ಸಾಯಂಕಾಲ ವಿಶ್ರಾಂತಿ ಪಡೆಯಲು ತೆರಳಿದಾಗ ಆಯಾತಪ್ಪಿ ಬಾವಿಗೆ ಬಿದ್ದಿದ್ದು, ಅಲ್ಲಿನ ಕೂಲಿ ಕಾರ್ಮಿಕರು ಪೋಲಿಸ್ ಪೇದೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.




