March 24, 2026

500 ರೂ.ಗಾಗಿ ನಡೆದ ಜಗಳ ಓರ್ವನ ಸ್ನೇಹಿತನ ಕೊಲೆ ಅಂತ್ಯ

0
image_editor_output_image712699502-1663910412385.jpg

ನವದೆಹಲಿ: ಕೇವಲ 500 ರೂ.ಗಾಗಿ ನಡೆದ ಜಗಳದಲ್ಲಿ ಸ್ನೇಹಿತನನ್ನು ಯುವಕನೇ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಶಾರುಖ್(22) ಮೃತ ವ್ಯಕ್ತಿ. ಶಾರುಖ್ ಸ್ನೇಹಿತ ಸಲ್ಮಾನ್(25)ನೊಂದಿಗೆ ಸಣ್ಣ ಜಗಳವಾಡಿದ್ದ ಇದರಿಂದ ಕೋಪಗೊಂಡ ಶಾರುಖ್‍ಗೆ ಸಲ್ಮಾನ್ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶಾರುಖ್‍ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಲ್ಮಾನ್‍ನನ್ನು ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಇಬ್ಬರು ಮಾದಕ ವ್ಯಸನಿಗಳಾಗಿದ್ದರು. ಶಾರುಖ್ ಕೆಲವು ಮಾದಕವಸ್ತುಗಳನ್ನು ತರಲು 500 ರೂ. ನೀಡಿದ್ದ. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಜಗಳವಾಗಿತ್ತು. ಸೇಡು ತೀರಿಸಿಕೊಳ್ಳಲು ಶಾರುಖ್‍ಗೆ ಚಾಕುವಿನಿಂದ ಸಲ್ಮಾನ್ ಇರಿದು ಪರಾರಿಯಾಗಿದ್ದಾನೆ ಎಂಬ ವಿಷಯ ಬಹಿರಂಗವಾಗಿದೆ.

Leave a Reply

Your email address will not be published. Required fields are marked *

error: Content is protected !!