December 16, 2025

ಮನೆಯಲ್ಲಿ ಕೋತಿಗಳ ಕಾಟ’ ಛಾವಣಿಯಿಂದ ಬಿದ್ದು ಬಾಲಕ‌ ಸಾವು

0
image_editor_output_image-271484366-1663049895755.jpg

ಲಕ್ನೋ: ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ 5 ವರ್ಷದ ಬಾಲಕನೊಬ್ಬ ಛಾವಣಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕ ನಿಖಿಲ್ ಮನೆಯ ಛಾವಣಿ ಮೇಲೆ ಆಟವಾಡುತ್ತಿದ್ದಾಗ ಕೋತಿಗಳ ಗುಂಪೊಂದು ಆತನ ಮೇಲೆ ದಾಳಿ ನಡೆಸಲು ಮುಂದಾಗಿವೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾನೆ. ಆದರೆ ಆತ ಛಾವಣಿಯಿಂದ ಬಿದ್ದಿರುವುದಾಗಿ ಬಾಲಕನ ತಂದೆ ನೆಕ್ರಮ್ ತಿಳಿಸಿದ್ದಾರೆ.

ಛಾವಣಿಯಿಂದ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ.

ಬಾಲಕ ಆಕಸ್ಮಿಕವಾಗಿ ಮನೆಯ ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಆತನ ಕುಟುಂಬದವರು ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲು ನಿರಾಕರಿಸಿದ್ದಾರೆ. ಇದು ಅಪಘಾತವಾದ್ದರಿಂದ ನಾವು ಬಲವಂತ ಮಾಡಲಿಲ್ಲ ಎಂದು ಅಲಾಪುರ್ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಸಂಜಯ್ ಸಿಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!