ಅಲ್ -ಅಮೀನ್ ಪೆರುವಾಯಿ U.A.E ವತಿಯಿಂದ ಮಿಲಾದ್ ಮಿಲನ ಕಾರ್ಯಕ್ರಮ
ವಿಟ್ಲ: ಅಲ್ -ಅಮೀನ್ ಪೆರುವಾಯಿ .U.A.E ಸಂಘಟನೆಯು ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವಂತಹ ” ಮಿಲಾದ್ ಮಿಲನ ಕಾರ್ಯಕ್ರಮ ಮತ್ತು ಮೌಲೀದ್ ಪಾರಾಯಣ
ಜl ಹಮೀದ್ ದೈಗೊಳಿ ಶಾರ್ಜಾರವರ ನಿವಾಸದಲ್ಲಿ, ಖಲೀಲ್ ಕಾನ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಜನಾಬ್ ಶರೀಫ್ ಸಾಲೆತ್ತೂರು ಶಾರ್ಜಾರವರು ದುಹಾ ಆಶೀರ್ವಚನವನ್ನು ನೀಡಿ ಮೌಲೀದ್ ಪಾರಾಯಣ ದ ನೇತ್ರತ್ವ ವಹಿಸಿದ್ದರು.
ಕಾರ್ಯಕ್ರಮವನ್ನು ಖಿರಾಹತ್ ಪಾರಾಯಣದ ಮುಖಾಂತರ ಹಮೀದ್ ದೈಗೊಳಿ ರವರ ಸುಪುತ್ರ ಮಾಸ್ಟರ್ ಮೊಹಮ್ಮದ್ ಅಸ್ಫಾಕ್ ಮತ್ತು ಜನಾಬ್ ಮೂಸಾ ಸೇನೆರೆಪಾಲುರವರ ಸುಪುತ್ರಿ ಕುಮಾರಿ ಶಾನಿಬಾ ಮೋಳ್ ಪ್ರಾರಂಭಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಮೀದ್ ಕುಂಬ್ಳೆ ಮಾಡಿದರು.
ಆಯವ್ಯಯ ಮಂಡನೆಯನ್ನು ಮುಖ್ಯ ಕಾರ್ಯದರ್ಶಿ ಜ. ಅಶ್ರಫ್ ಮುಚ್ಚಿರಪದವು ನೆರವೇರಿಸಿದರು.
ಮೂಸಾ ಸೇನೆರಪಾಲು ಭಾಗವಹಿಸಿದ್ದರು.
ಕಾರ್ಯಕ್ರಮದ ನಡುವೆ ಮುಹಮ್ಮದ್ ಮುಸ್ತಫಾ (ಸ. ಅ.) ತಂಙಳ್ ರವರ ಬಗ್ಗೆ ಮದ್ಹ್ ಗಾನ ಮತ್ತು ಭಾಷಣ ಸ್ಪರ್ಧೆ ಆಯೋಜಿಸಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ನೀಡಲಾಯಿತು.
ಸಮೀರ್ ದರ್ಕಾಶ್ ನಿರೂಪಿಸಿದರು. ಮಾಜಿ ಕಾರ್ಯದರ್ಶಿ ಸಲೀಂ ಮುಚ್ಚಿರಪದವು ಪ್ರಸ್ತಾವನೆ ಮಾಡಿದರು. ಶಾಫಿ ಮುಚ್ಚಿರಪದವು ವಂದಿಸಿದರು. ಬಾತಿಷ್ ಕಾನ ಸ್ವಾಗತಿಸಿದರು.






