March 20, 2026

ನಟ ವಿಜಯ್ ಸೇತುಪತಿಗೆ ಒದೆಯುವವರಿಗೆ 1,001 ರೂ. ಬಹುಮಾನ ಘೋಷಣೆ

0
Screenshot_2021-11-08-10-38-45-99_680d03679600f7af0b4c700c6b270fe7.jpg

ಚೆನ್ನೈ: ಕೆಲ ದಿನಗಳ ಹಿಂದೆ ನಟ ವಿಜಯ್ ಸೇತುಪತಿ ಮತ್ತು ಅವರ ತಂಡವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗ ವ್ಯಕ್ತಿಯೊಬ್ಬ ಒದೆಯಲು ಯತ್ನಿಸಿದ ವೀಡಿಯೊ ವೈರಲ್ ಆಗಿತ್ತು.

ನಟ ಈ ವಿಷಯವನ್ನು ಸಣ್ಣ ಜಗಳ ಎಂದು ತಳ್ಳಿಹಾಕಿದರೆ, ಹಿಂದೂ ಮಕ್ಕಳ್ ಕಚ್ಚಿ ಎಂದು ಕರೆಯಲ್ಪಡುವ ಗುಂಪೊಂದು ವಿಜಯ್ ಸೇತುಪತಿಗೆ ಒದೆಯುವವರಿಗೆ 1,001 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ಹಿಂದೂ ಮಕ್ಕಳ್ ಕಚ್ಚಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ವಿಜಯ್ ಸೇತುಪತಿ ಅವರು ಸ್ವಾತಂತ್ರ್ಯ ಹೋರಾಟಗಾರ ದೈವತಿರು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅಯ್ಯ ಮತ್ತು ದೇಶವನ್ನು ಅವಮಾನಿಸಿದ್ದಾರೆ ಎಂದು ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.

“ತೇವರ್ ಅಯ್ಯ ಅವರನ್ನು ಅವಮಾನಿಸಿದ ನಟ ವಿಜಯ್ ಸೇತುಪತಿಗೆ ಒದೆಯುವವರಿಗೆ ಅರ್ಜುನ್ ಸಂಪತ್ ಅವರು ನಗದು ಪುರಸ್ಕಾರವನ್ನು ಘೋಷಿಸಿದ್ದಾರೆ. 1 ಕಿಕ್ ಗೆ 1001 ರೂ. ಎಂದು ಟ್ವೀಟ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!