March 25, 2026

ಸುರತ್ಕಲ್ ಫಾಝಿಲ್ ಕೊಲೆ ಪ್ರಕರಣ: ಈ ಕೃತ್ಯದ ಹಿಂದಿನ ಕಾಣದ ಕೈಗಳ ಬಂಧವಾಗಿಲ್ಲ: ಅಳಲು ತೋಡಿಕೊಂಡ ಫಾಝಿಲ್ ತಂದೆ ಫಾರೂಕ್

0
image_editor_output_image200483723-1661924927627.jpg

ಮಂಗಳೂರು: ಸುರತ್ಕಲ್ ಫಾಝಿಲ್ ಹತ್ಯೆ ಹಿಂದಿನ ಆರೋಪಿಗಳ ಬಂಧನ ಆಗಿಲ್ಲ. 27 ವರ್ಷಗಳ ಹಿಂದಿನ ಕಾರಿನಲ್ಲಿ ಆರೋಪಿಗಳು ಪರಾರಿಯಾಗಲು ಸಾಧ್ಯನಾ..? ಇದ್ರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎಂದು ಮೃತ ಫಾಝೀಲ್ ತಂದೆ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತ್ಯಕ್ಕೆ ಸಹಕಾರ ಮಾಡಿದ ಪಲ್ಲಮಜಲು ನಿವಾಸಿ ಬಂಧನ ಮಾಡಲಾಗಿದೆ. ಇಲ್ಲಿ ಆತನಿಗೆ ಚಾ ಕುಡಿಯಲು ಯಾರಾದ್ರೂ ಹಣ ನೀಡಬೇಕು ಹಾಗಿದ್ದಾನೆ. ಅಂತವನಿಂದ ಕೃತ್ಯಕ್ಕೆ ಹಣ ಸಹಾಯ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಇಲ್ಲಿನ ಅಧಿಕಾರಿಗಳು ಉತ್ತಮರಿದ್ದಾರೆ. ರಾಜಕೀಯದವರು ಅವರ ಕೈ ಕಟ್ಟಿ ಹಾಕಿದ್ದಾರೆ. ಈ ಕೃತ್ಯದ ಹಿಂದೆ ಕಾಣದ ಕೈಗಳ ಸಹಕಾರ ಇದೆ. ಇಂತಹ ಸ್ಥಿತಿ ಯಾವ ತಂದೇಗೂ ಬರಬಾರದು ಎಂದು ಫಾಝಿಲ್ ತಂದೆ ಫಾರೂಕ್ ಅಳಲು ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!