March 25, 2026

ಸುಳ್ಯ: ಯುವತಿ ಜತೆ ಅನ್ಯಕೋಮಿನ ಯುವಕ ಪತ್ತೆ: ಯುವಕನಿಗೆ ಬಾಸುಂಡೆ ಬರುವ ಹಾಗೇ ಥಳಿತ: ಫೋಟೋ ವೈರಲ್

0
image_editor_output_image-419200838-1661917146826

ಸುಳ್ಯ: ಖಾಸಗಿ ಕಾಲೇಜಿನ  ಹಿಂದೂ ವಿದ್ಯಾರ್ಥಿನಿ ಹಾಗೂ ಸರಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿ ನಿರ್ಜನ ಪ್ರದೇಶದಲ್ಲಿ ಜತೆಯಾಗಿ ತಿರುಗಾಡುತ್ತಿದ್ದರು. ಹೀಗೆ ಭಿನ್ನ ಕೋಮಿನ (Interfaith) ಜೋಡಿ ಜತೆಯಾಗಿರುವುದನ್ನು ಗಮನಿಸಿದ ತಂಡವೊಂದು ಯುವಕನ ಮೇಲೆ ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎನ್ನಲಾಗಿದೆ. ಘಟನೆಯೂ  ಆ 30 ರಂದು ನಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಭ್ಯ ಮಾಹಿತಿ ಪ್ರಕಾರ  ಮುಸ್ಲಿಂ ವಿದ್ಯಾರ್ಥಿ ಸುಳ್ಯದ ಸರಕಾರಿ ಕಾಲೇಜಿನ ವಿದ್ಯಾರ್ಥಿ. ಹಿಂದೂ ವಿದ್ಯಾರ್ಥಿನಿ  ಸುಳ್ಯದ ಪ್ರತಿಷ್ಟಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ. ಇವರಿಬ್ಬರು  ಕಾಲೇಜಿನ ಅವರಣದಿಂದ ಹೊರಗಡೆ ನಿರ್ಜನ ಪ್ರದೇಶವೊಂದರಲ್ಲಿ ಜತೆಯಾಗಿ ವಿಹಾರಿಸುತ್ತಿದ್ದರು ಎನ್ನಲಾಗಿದೆ. ಇವರಿಬ್ಬರು ಹೀಗೆ ಸಂಪರ್ಕದಲ್ಲಿರುವುದನ್ನು ಹಾಗೂ ಅಗಾಗ ಜತೆಯಲ್ಲಿ ತಿರುಗಾಡುತ್ತಿರುವ ಮಾಹಿತಿ  ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರ ಗಮನಕ್ಕೆ ಬಂದಿತ್ತು ಹಾಗೂ ಈ ಬಗ್ಗೆ ಎಚ್ಚರಿಕೆ ಕೂಡ ನೀಡಿದ್ದರು ಎನ್ನಲಾಗಿದೆ. ಅದರು ಅವರ ಒಡನಾಟ ಮುಮದುವರಿದಿತ್ತು ಎನ್ನಲಾಗಿದೆ

ಹೀಗಾಗಿ ಇವರ ಚಲನವಲನವನ್ನು ಆ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಹೊಂಚು ಹಾಕಿ  ಗಮನಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ಇವರಿಬ್ಬರು ಕಾಲೇಜು ಪಕ್ಕದ ಗುಡ್ಡವೊಂದರಲ್ಲಿ ಜತೆಯಾಗಿ ಇರುವ ಮಾಹಿತಿ ಪಡೆದ ಸಂಘಟನೆಯ ಯುವಕರು ಅಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಹಿಂದೂ ವಿದ್ಯಾರ್ಥಿನಿ  ತಾನು ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾಳೆ. ಅಲ್ಲದೇ ಇದು ನಮ್ಮಿಬ್ಬರ ವೈಯುಕ್ತಿಕ ಇಚ್ಚೆ . ಅದಕ್ಕೆ ನೀವು ತಲೆ ಹಾಕಬೇಡಿ ಎಂದು ಸಂಘಟನೆಯ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಸಂಘಟನೆಯ ವಿದ್ಯಾರ್ಥಿಗಳು ಹಾಗೂ ಕೆಲ ಬೇರೆ ಯುವಕರು ಒಟ್ಟು ಸೇರಿ ಮುಸ್ಲಿಂ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದ್ದು , ಇದನ್ನು ಪುಷ್ಟಿಕರಿಸುವಂತೆ ಕೆಲವೊಂದು ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್‌ ಆಗುತ್ತಿದೆ. ಅದರಲ್ಲಿ ಅರೆ ಬೆತ್ತಲಾಗಿರುವ ಯುವಕನ ಬೆನ್ನ ಮೇಲೆ ರಕ್ತ ಹೆಪ್ಪುಗಟ್ಟಿರುವ ದೊಡ್ಡ ದೊಡ್ಡ ಗಾತ್ರದ  ಬಾಸುಂಡೆಗಳು ಗೋಚರಿಸುತ್ತೇವೆ.

ಆದರೇ ಆ ಫೋಟೊದಲ್ಲಿ ಯುವಕನ ಮುಖ ಕಾಣಿಸುತ್ತಿಲ್ಲವಾದುದರಿಂದ ಅದು ಯಾರ ಪೋಟೊ ಎನ್ನುವುದು ಖಚಿತಗೊಂಡಿಲ್ಲ. ಆದರೇ ಅದು ಮುಸ್ಲಿಂ ವಿದ್ಯಾರ್ಥಿಗೆ ಗುಂಪು ಥಳಿಸಿದ ಬಳಿಕ ಅವರೇ ಚಿತ್ರಿಕರಿಸಿದ ಪೋಟೊ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಇನ್ನು ಆ ಇಬ್ಬರು ಭಿನ್ನ ಕೋಮಿನ ಜೋಡಿಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಶೇರ್‌ ಆಗಿದೆ. ಅದರಲ್ಲಿ ಆ ವಿದ್ಯಾರ್ಥಿಗಳು ಕಾಲೇಜ್‌  ಯೂನಿಫಾರ್ಮ್‌ ಧರಿಸಿರುವುದನ್ನು ಕಾಣಬಹುದಾಗಿದೆ.

ಮೂಲಗಳ ಪ್ರಕಾರ ಹಲ್ಲೆಗೊಳಗಾದ ವಿದ್ಯಾರ್ಥಿ  ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಆದರೇ ಪೊಲೀಸರು FIR ದಾಖಲು ಮಾಡಿರುವ ಮಾಹಿತಿ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!