May 29, 2026

ಕೊಕ್ಕಡ: ಮಹಿಳೆಯ ಮೃತದೇಹ ಪತ್ತೆ, ಪತಿಯ ಮೇಲೆ ಕೊಲೆ ಶಂಕೆ

0
IMG-20220830-WA0033.jpg

ನೆಲ್ಯಾಡಿ : ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ಆಕೆಯ ಪತಿ ಹಲ್ಲೆ ನಡೆಸಿರುವುದರಿಂದಲೇ ಮಹಿಳೆ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ ಎಂಬವರ ಪತ್ನಿ ಮೋಹಿನಿ (35ವ) ಮೃತಪಟ್ಟ ಮಹಿಳೆಯಾಗಿದ್ದಾರೆ. ಇಂದು ಆ.30ರಂದು ಬೆಳಿಗ್ಗೆ 11 ಗಂಟೆಗೆ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದಿದ್ದು ಪತಿಯಿಂದ ಹಲ್ಲೆಗೊಳಗಾಗಿ ಮೋಹಿನಿಯವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರೆಳಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!