February 4, 2026

ಮಡಿಕೇರಿ: ಕಾಡು ಪ್ರಾಣಿ ಬೇಟೆಗೆ ತೆರಳಿದ್ದಾಗ ಗುಂಡೇಟು ತಗುಲಿ ವ್ಯಕ್ತಿ ಮೃತ್ಯು

0
image_editor_output_image742088606-1661791040094

ಮಡಿಕೇರಿ: ಗುಂಡೇಟು ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಯಡವಾರೆ ಗ್ರಾಮದಲ್ಲಿ ನಡೆದಿದೆ.

ಯಡವಾರೆ ಗ್ರಾಮದ ಶಿವಕುಮಾರ್ (58) ಮೃತ ದುರ್ದೈವಿ. ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಬೇಟೆಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ.

ನಿನ್ನೆ ರಾತ್ರಿ 6 ಮಂದಿಯ ತಂಡ ಕಾಡು ಪ್ರಾಣಿಗಳ ಬೇಟೆಗೆ ತೆರಳಿತ್ತು. ಈ ವೇಳೆ ಶಿವಕುಮಾರ್ ಎಂಬಾತನ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇವರ ಜತೆ ಬೇಟೆಗೆ ತೆರಳಿದ್ದ ಚನ್ನಕೇಶವ, ಚೇತನ್, ನಂದೀಶ್, ಮಂಜುನಾಥ್ ರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!