March 25, 2026

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಕಡೆಗಳಲ್ಲಿ “ನಮ್ಮ ಕ್ಲಿನಿಕ್”

0
image_editor_output_image-1340404748-1661407449233.jpg

ಮಂಗಳೂರು: ನವದೆಹಲಿಯಲ್ಲಿ ಜಾರಿಗೆ ತಂದಿರುವ ಮೊಹಲ್ಲ ಕ್ಲಿನಿಕ್ ಮಾದರಿಯಲ್ಲಿಯೇ ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿಯೂ ಜಾರಿಗೊಳಿಸಲು ಚಿಂತಿಸಲಾಗಿದೆ.

ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14ಕಡೆ “ನಮ್ಮ ಕ್ಲಿನಿಕ್” ತೆರೆಯಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.

ರಾಜ್ಯದಲ್ಲಿ ಒಟ್ಟು 940 ಕ್ಲಿನಿಕ್ ಬರಲಿದ್ದು, ಈ ಪೈಕಿ ಮೊದಲ ಹಂತದಲ್ಲಿ ೪೩೮ ನಮ್ಮ ಕ್ಲಿನಿಕ್ ಕಾರ್ಯಾರಂಭಿಸಲಿದೆ. ಮಂಗಳೂರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7 , ಉಳ್ಳಾಲ ,ಮೂಡುಬಿದಿರೆ, ಮೂಲ್ಕಿ ಬಂಟ್ವಾಳ ಪುತ್ತೂರು, ಕಡಬ, ಹಾಗೂ ಸುಳ್ಯ ಭಾಗದಲ್ಲಿ ತಲಾ ಒಂದೊಂದು ಕ್ಲಿನಿಕ್ ಗಳು ಆರಂಭವಾಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಾದರಿಯಲ್ಲೇ ನಮ್ಮ ಕ್ಲಿನಿಕ್ ಕಾರ್ಯಾಚರಿಸಲಿದೆ. ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಇದು ಕೆಲಸ ,ಮಾಡಲಿದೆ. ವೈದ್ಯರು, ಸ್ಟಾಫ್ ನರ್ಸ್ , ಡಾಟಾ ಎಂಟ್ರಿ, ಗ್ರೂಪ್ ಡಿ, ಲ್ಯಾಬ್ ಟೆಕ್ನೀಶಿಯನ್ ಸಿಬ್ಬಂದಿ ಇರಲಿದ್ದಾರೆ

‘ನಮ್ಮ ಕ್ಲಿನಿಕ್‌’ ಯೋಜನೆಯಡಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 7 ಸೇರಿದಂತೆ ಸ್ಲಂ ಪ್ರದೇಶಗಳಲ್ಲಿ ಈ ಕ್ಲಿನಿಕ್‌ ಸ್ಥಾಪಿಸಬೇಕಾಗಿದ್ದು, ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳಿಲ್ಲದಿರುವುದರಿಂದ ಕಟ್ಟಡ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಈ ಕ್ಲಿನಿಕ್‌ ರಚಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!