February 3, 2026

ಬಂಟ್ವಾಳ: ಪೊಲೀಸ್ ಠಾಣಾ ಕಂಪೌಂಡ್ ಜರಿದು ಬಿದ್ದು ಕಾರಿಗೆ ಹಾನಿ

0
IMG_20220824_152553.jpg

ಬಂಟ್ವಾಳ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಗ್ರಾಮಾಂತರ ಪೊಲೀಸ್ ಠಾಣೆ ಕಂಪೌಂಡ್ ಗೋಡೆಯೊಂದು ಜರಿದು ಬಿದ್ದು ನಿಲ್ಲಿಸಿದ್ದ ಕಾರೊಂದು ಹಾನಿಗೊಳಗಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಧಾರಾಕಾರ ಮಳೆಗೆ ಅನೇಕ ಹಾನಿಗಳಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅಷ್ಟೇ ಅಲ್ಲದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣ ಗೋಡೆ ಬಿದ್ದು ನೆಲಸಮವಾಗಿದ್ದು, ಕೆಳಗೆ ನಿಲ್ಲಿಸಿದ್ದ ಕಾರು ಕೂಡಾ ನಜ್ಜುಗುಜ್ಜಾಗಿದೆ.

ಠಾಣೆಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿಯ ಮನೆಯೂ ಇರುವುದರಿಂದ ಆವರಣ ಗೋಡೆ ನಿರ್ಮಾಣ ಮಾಡಿ ಭದ್ರತೆ ಒದಗಿಸಲಾಗಿತ್ತು. ಆದರೆ ಗೋಡೆ ಕುಸಿದು ಹೆದ್ದಾರಿಗೆ ಬಿದ್ದಿದೆ.

ಮೇಲ್ಭಾಗದಲ್ಲಿ ಮನೆ ಹಾಗೂ ತೆಂಗಿನ ಮರಗಳಿದ್ದು ಅಪಾಯದ ಅಂಚಿನಲ್ಲಿದೆ. ಭಂಡಾರಿಬೆಟ್ಟು ಎಂಬಲ್ಲಿ ಕೂಡಾ ಗುಡ್ಡ ಕುಸಿದು ಧರಾಶಾಹಿಯಾಗಿದೆ. ತಾಲ್ಲೂಕಿನ ಹಲವಾರು ಕಡೆ ಎರಡು ದಿನದ ಈ ಮಳೆ ಅನೇಕ ಅವಾಂತರಗಳನ್ನು ಸೃಷ್ಠಿಸಿ ನಷ್ಟ ಉಂಟಾಗುವಂತೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!