February 2, 2026

ಮಂಜೇಶ್ವರ: ಆಗಸ್ಟ್ 25ರಂದು ಕಲಿಯಾರ್‌ನಲ್ಲಿ ಸ್ವಲಾತ್ ವಾರ್ಷಿಕ, ಸನದುದಾನ ಸಮ್ಮೇಳನ

0
image_editor_output_image781893273-1661272808057

ಮಂಜೇಶ್ವರ: ಇಲ್ಲಿನ‌ ಬಾಯಾರ್ ಸಮೀಪದ ಕಲಿಯಾರ್‌ ರಹ್ಮತ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಸ್ವಾಬಿರೀ ಮಸ್ಜಿದ್, ಜಲಾಲಿಯಾ ಹಿಫ್ಲುಲ್ ಕುರ್‌ಆನ್ ಕಾಲೇಜಿನ ಸನದುದಾನ ಮತ್ತು ಇಲ್ಲಿ ಪ್ರತೀ ತಿಂಗಳು ನಡೆಯುವ ಸ್ವಲಾತ್‌ನ 10ನೇ ವಾರ್ಷಿಕೋತ್ಸವ ಆ 25ರಂದು ನಡೆಯಲಿದೆ.

ಕೇರಳ ಕರ್ನಾಟಕದ ವಿವಿಧ ಭಾಗಗಳಿಂದ ಇಲ್ಲಿ ನಡೆಯುವ ಸ್ವಲಾತ್ ಮಜ್ಲಿಸಿನಲ್ಲಿ ಮಾಸಂಪ್ರತಿ ಸಾವಿರಾರು ಮಂದಿ ಭಾಗವಹಿಸುತ್ತಿದ್ದು,  ಹಲವು ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾಗಿದೆ.

ಧಾರ್ಮಿಕ, ಆಧ್ಯಾತ್ಮಿಕ ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವ ಪ್ರಸ್ತುತ ಸಂಸ್ಥೆಯಲ್ಲಿ ದ.ಕ ಜಿಲ್ಲೆ ಸಹಿತ ನೂರಾರು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದು ಕೇರಳದ ಕಣ್ಣೂರು ಜಿಲ್ಲೆಯ ಚಪ್ಪಾರಪ್ಪಡವು ಜಾಮಿಯ್ಯ ಇರ್ಫಾನಿಯ್ಯದ ಅಧೀನ ಸಂಸ್ಥೆಯಾಗಿರತ್ತದೆ.

ಆಗಸ್ಟ್ 25 ರಂದು ನಡೆಯುವ ಸಮ್ಮೇಳನದಲ್ಲಿ ದ.ಕ ಜಿಲ್ಲೆಯ ಸಹಿತ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು,
ಕಾರ್ಯಕ್ರಮದ ನೇತ್ರತ್ವವನ್ನು ಸೂಫಿವರ್ಯರಾದ ಶೈಖುನಾ ಚಪ್ಪಾರಪ್ಪಡವು ಉಸ್ತಾದ್ ವಹಿಸಲಿದ್ದಾರೆ. ಸ್ವಾಹಿಬುಲ್ ಮೌಲಾ ಅಹ್ಮದ್ ವಲಿಯುಲ್ಲಾಹಿ ಕುಞಿಪ್ಪಳ್ಳಿ ಮತ್ತು ಇತರ ಪ್ರಮುಖ ಉಲಮಾ, ಉಮರಾಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!