March 25, 2026

ಲಾಡ್ಜ್ ನ ಮೂರನೇ ಮಹಡಿಯಿಂದ ಕೆಳಗೆ ಹಾರಿ ಯುವಕ ಆತ್ಮಹತ್ಯೆ

0
image_editor_output_image-168629250-1660922545591.jpg

ತುಮಕೂರು: ಲಾಡ್ಜ್ ವೊಂದರ ಮೂರನೇ ಮಹಡಿಯಿಂದ ಕೆಳಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಮಹಾರಾಷ್ಟ್ರ ಮೂಲದ ದೈವಿಕ್ (19) ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರದಿಂದ‌ ಬೆಂಗಳೂರಿಗೆ ಹೋಗಲು ಬಂದಿದ್ದ ದೈವಿಕ್, ಗುರುವಾರ ಸಂಜೆ 6 ಗಂಟೆಯಲ್ಲಿ ತುಮಕೂರು ‌ನಗರದ ಬಟವಾಡಿ ಬಳಿಯಿರುವ ಎಸ್​ವಿಎಸ್ ಲಾಡ್ಜ್​ನಲ್ಲಿ ಒಬ್ಬನೆ ರೂಂ ಬಾಡಿಗೆ ಪಡೆದಿದ್ದು, ರಾತ್ರಿ ಲಾಡ್ಜ್​​ನ‌ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ತುಮಕೂರಿನ ಎನ್​ಇಪಿಎಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!