March 25, 2026

ಪ್ರತ್ಯೇಕ ರಸ್ತೆ ಅಪಘಾತ: ದಂಪತಿ‌ ಸಹಿತ ನಾಲ್ವರು ಸಾವು, 8 ಮಂದಿ ಗಾಯ

0
image_editor_output_image-1172942906-1660916539764.jpg

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ.

17-ಮೈಲ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ನಡುವೆ ಗುರುವಾರ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಅಸುನೀಗಿದ್ದಾರೆ. ಉತ್ತರಪ್ರದೇಶದ ಲಲಿತ್‌ಪುರ ಮೂಲದ ರೋಹಿತ್ ಕೌಶಿಕ್ (23) ಮತ್ತು ಮಾನ್ಸಿ (23) ಮೃತಪಟ್ಟವರು.

ಜಿಲ್ಲೆಯ ಮಂಡಿಯ ಖುರಿ ಬಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಡಸ್ಟರ್ ಕಾರೊಂದು ಕಮರಿಗೆ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಶಿಮ್ಲಾ ಜಿಲ್ಲೆಯ ನರಕಂದ ನಿವಾಸಿ ಅಂಚಲಾ ಇಂದರ್ ನಾಥ್ ಮೃತಪಟ್ಟವರು. ಕಾರಲ್ಲಿದ್ದ ಇತರ ನಾಲ್ವರು ಗಾಯಗೊಂಡಿದ್ದು, ಅವರನ್ನು ನೆರ್ಚೋಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!